ನವದೆಹಲಿ:ಕೊರೊನಾ ವಿರುದ್ಧದ ಹೋರಾಟಕ್ಕಾಗಿ ದೇಶವನ್ನು ಲಾಕ್‌ಡೌನ್ ಸ್ಥಿತಿಯಲ್ಲಿಡಲಾಗಿದೆ. ಇದ್ರ ಪರಿಣಾಮ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೆ, ಕೃಷಿಗೆ ಅಗತ್ಯ ವಸ್ತುಗಳು ಸಿಗದೆ ರೈತರು ಚಿಂತೆಗೀಡಾಗಿದ್ದಾರೆ. ಈ ನಿಟ್ಟಿನಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳಿಗೆ ಮುಂದಾಗಿರುವ ಕೇಂದ್ರ ಸರ್ಕಾರ ಈಗಾಗಲೇ ರೈತನ ನೆರವಿಗೆ ಧಾವಿಸಿದೆ.
ಪಿಎಂ ಕಿಸಾನ್ ಯೋಜನೆಯಡಿ ಬರೋಬ್ಬರಿ 7 ಕೋಟಿ ರೈತರ ಖಾತೆಗೆ ಹಣ ಜಮಾವಣೆ ಮಾಡಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಈಗಾಗಲೇ 13,855 ಕೋಟಿ ರೂ ನಿಟ್ಟಿನಲ್ಲಿ ಜಮಾವಣೆಗೊಂಡಿದೆ ಎಂದು ಹಣಕಾಸು ಇಲಾಖೆ ಮಾಹಿತಿ ನೀಡಿದ್ದು, ಮಹಿಳೆಯರು, ಹಿರಿಯ ನಾಗರಿಕರು ತೊಂದರೆಗೆ ಒಳಗಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದಿದೆ.
ರೈತರ ಬ್ಯಾಂಕ್ ಖಾತೆಗಳಿಗೆ ಪ್ರತಿ ವರ್ಷ 6 ಸಾವಿರ ರೂ ನಗದು ಜಮೆ ಮಾಡುವ ಪಿಎಂ ಕಿಸಾನ್ ಯೋಜನೆ ಪ್ರಕಾರ, ಮುಂದಿನ ಏಪ್ರಿಲ್-ಜೂನ್ ತಿಂಗಳಲ್ಲಿ ಹಣ ಜಮೆಯಾಗಬೇಕಿತ್ತು. ಆದರೆ ದೇಶದಲ್ಲಿ ಲಾಕ್‌ಡೌನ್ ಕಾರಣ ಅನ್ನದಾತರ ಸಮಸ್ಯೆಗಳ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಮುಂಚಿತವಾಗಿ ಹಣ ನೀಡಲಾಗಿದೆ.