ಕರ್ನಾಟಕ

karnataka

ETV Bharat / bharat

ಅಸ್ಸಾಂನಲ್ಲಿ ಮೊದಲ ಬಲಿ: ಈಶಾನ್ಯ ರಾಜ್ಯದಲ್ಲಿ 28 ಮಂದಿಗೆ ಸೋಂಕು - ತಬ್ಲಿಘಿ ಜಮಾತ್​

ಕೊರೊನಾ ಮಹಾಮಾರಿಗೆ ಅಸ್ಸಾಂನಲ್ಲಿ ಮೊದಲ ಬಲಿಯಾಗಿದ್ದು, ಕೋವಿಡ್​-19 ಪ್ರೋಟೋಕಾಲ್​ನಂತೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

corona
ಕೊರೊನಾ

By

Published : Apr 10, 2020, 11:25 AM IST

ಗೌಹಾತಿ (ಅಸ್ಸಾಂ):ಕೊರೊನಾ ಕಾರಣಕ್ಕೆ ಅಸ್ಸಾಂನಲ್ಲಿ ಮೊದಲ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವ ಹಿಮವಂತ ಬಿಸ್ವಾ ಶರ್ಮ ತಿಳಿಸಿದ್ದಾರೆ.

ಮೃತ ವ್ಯಕ್ತಿ 65 ವರ್ಷದ ಬಿಎಸ್​ಎಫ್​ ನಿವೃತ್ತ ಸಿಬ್ಬಂದಿಯಾಗಿದ್ದು ಹೈಲಕಂಡಿ ಜಿಲ್ಲೆಯವನಾಗಿದ್ದಾನೆ. ಸೋಂಕಿತನ ಸ್ಥಿತಿ ಗಂಭೀರವಾಗಿದ್ದ ಕಾರಣ ಸಿಲ್ಚಾರ್ ​ಆಸ್ಪತ್ರೆಯ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ, ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ ಎಂದು ಆರೋಗ್ಯ ಸಚಿವರು ಟ್ವೀಟ್​ ಮಾಡಿದ್ದಾರೆ.

ಮೃತನ ಅಂತ್ಯಸಂಸ್ಕಾರವನ್ನು ಕೋವಿಡ್​-19 ಪ್ರೋಟೋಕಾಲ್​ನ ಅನುಸಾರ ನಡೆಸಲಾಗಿದೆ ಎಂದು ಸಿಲ್ಚಾರ್​ ಸಂಸದ ರಾಜದೀಪ್​ ರಾಯ್​ ಸ್ಪಷ್ಟನೆ ನೀಡಿದ್ದಾರೆ.

ಅಸ್ಸಾಂನಲ್ಲಿ ಕೆಲ ದಿನಗಳ ಹಿಂದೆ ಓರ್ವನಲ್ಲಿ ಸೋಂಕು ಪತ್ತೆಯಾಗಿದ್ದು, ಆತನ ದೆಹಲಿಯ ನಿಜಾಮುದ್ದೀನ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗಿದೆ. ಜೊತೆಗೆ ಸೌದಿ ಅರೇಬಿಯಾಗೂ ಪ್ರಯಾಣ ಬೆಳೆಸಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿದೆ.

ABOUT THE AUTHOR

...view details