ಲತೆಹರ್ (ಜಾರ್ಖಂಡ್): ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಪದಾರ್ಥಗಳ ವಿತರಣೆಯ ಬಯೊಮೆಟ್ರಿಕ್ ವ್ಯವಸ್ಥೆ ಇಲ್ಲಿನ ಕುಟುಂಬ ಸದಸ್ಯರ ಸಾವಿಗೆ ಕಾರಣವಾಗಿದೆ.
ಪಡಿತರ ಬಯೊಮೆಟ್ರಿಕ್ ತಂದ ಸಾವು... 4 ದಿನ 'ಅನ್ನ ಅನ್ನ'ಎಂದು ಅಗಲಿದ ವೃದ್ಧ -
ಪಡಿತರ ಚೀಟಿಯ ಸಿಂಧುತ್ವ ಪರಿಶೀಲನೆ ಹಾಗೂ ಪಡಿತರ ವಿತರಣೆಯ ವಿವರಗಳನ್ನು ಆನ್‌ಲೈನ್ ಮೂಲಕ ಸಾರ್ವಜನಿಕರಿಗೆ ಒದಗಿಸಿ, ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಸದಸ್ಯರ ಬೆರಳಚ್ಚು (ಬಯೊಮೆಟ್ರಿಕ್) ಮಾಹಿತಿಯನ್ನು ಯಂತ್ರಗಳಿಗೆ ಜೋಡಿಸಲಾಗಿದೆ.
ಪಡಿತರ ಚೀಟಿಯ ಸಿಂಧುತ್ವ ಪರಿಶೀಲನೆ ಹಾಗೂ ಪಡಿತರ ವಿತರಣೆಯ ವಿವರಗಳನ್ನು ಆನ್‌ಲೈನ್ ಮೂಲಕ ಸಾರ್ವಜನಿಕರಿಗೆ ಒದಗಿಸಿ, ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಸದಸ್ಯರ ಬೆರಳಚ್ಚು (ಬಯೊಮೆಟ್ರಿಕ್) ಮಾಹಿತಿಯನ್ನು ಯಂತ್ರಗಳಿಗೆ ಜೋಡಿಸಲಾಗಿದೆ. ಈ ಮೂಲಕ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ. ಜಾರ್ಖಂಡ್ನಲ್ಲಿ ಫಲಾನುಭವಿಗಳ ಬೆರಳಚ್ಚು ಬಯೊಮೆಟ್ರಿಕ್ಗೆ ತಾಳೆಯಾಗದೇ ಪಡಿತರ ಧಾನ್ಯ ವಿತರಣೆಯಾಗಿಲ್ಲ. ಹೀಗಾಗಿ, ಕಳೆದ ನಾಲ್ಕು ದಿನದಿಂದ ಹಸಿದ 65ರ ವೃದ್ಧನೊಬ್ಬ ಮೃತಪಟ್ಟಿದ್ದಾರೆ.
ರಾಮಚಂದ್ರ ಮುಂಡ ಹಸಿವಿನ ಭಾದೆ ತಾಳದೆ ಸಾವನ್ನಪ್ಪಿದವರು. 'ಪಡಿತರ ಬಯೊಮೆಟ್ರಿಕ್ ಯಂತ್ರ ಬೆರಳಚ್ಚುಗೆ ತಾಳೆಯಾಗದೇ ಆಹಾರ ಧಾನ್ಯ ವಿತರಣೆ ಆಗಿರಲಿಲ್ಲ. ಕಳೆದ ಮೂರು ತಿಂಗಳಿಂದ ನಮಗೆ ಪಡಿತರ ಆಹಾರ ಪದಾರ್ಥಗಳು ಸಿಗುತ್ತಿಲ್ಲ. ನಾಲ್ಕು ದಿನದಿಂದ ತಿನ್ನಲ್ಲೂ ಏನೂ ಇಲ್ಲದೇ ಹಸಿವಿನಿಂದ ನಮ್ಮ ತಂದೆ ಸಾವನ್ನಪ್ಪಿದ್ದಾರೆ' ಎಂದು ಮೃತರ ಮಗಳು ಅಳಲು ತೋಡಿಕೊಂಡಿದ್ದಾರೆ.