ಗುವಹಾಟಿ: ಅಸ್ಸೋಂನಲ್ಲಿ ಇಂದು ಒಟ್ಟು 644 ಉಗ್ರರು 177 ಶಸ್ತ್ರಾಸ್ತ್ರಗಳೊಂದಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಶಾನ್ಯ ಭಾರತದಲ್ಲಿ ಮಹತ್ವದ ಬದಲಾವಣೆ: ಅಸ್ಸೋಂನಲ್ಲಿ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 644 ಉಗ್ರರು! - 644 ಉಗ್ರರು ಪೊಲೀಸರಿಗೆ ಶರಣು
ಹಲವು ಉಗ್ರ ಸಂಘಟನೆಯ 644 ಸದಸ್ಯರು ಅಸ್ಸೋಂನಲ್ಲಿ ಶಸ್ತ್ರಾಸ್ತ್ರ ತ್ಯಜಿಸಿ ಪೊಲೀಸರಿಗೆ ಶರಣಾಗಿದ್ದಾರೆ.
ಯುಎಲ್ಎಫ್ಎ (ಐ), ಎನ್ಡಿಎಫ್ಬಿ, ಆರ್ಎನ್ಎಲ್ಎಫ್, ಕೆಎಲ್ಓ, ಸಿಪಿಐ(ಮಾವೋವಾದಿ), ಎನ್ಎಸ್ಎಲ್ಎ, ಎಡಿಎಫ್ ಮತ್ತು ಎನ್ಎಲ್ಎಫ್ಬಿ ಸಂಘಟನೆಯ ಸದಸ್ಯರು, ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶರಣಾಗಿದ್ದಾರೆ.
ಇದು ರಾಜ್ಯ ಮತ್ತು ಅಸ್ಸೋಂ ಪೊಲೀಸರಿಗೆ ಮಹತ್ವದ ದಿನವಾಗಿದೆ. ಒಟ್ಟಾರೆಯಾಗಿ 644 ಕಾರ್ಯಕರ್ತರು ಮತ್ತು ಎಂಟು ಉಗ್ರಗಾಮಿ ಗುಂಪುಗಳ ಮುಖಂಡರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ಜ್ಯೋತಿ ಮಹಂತಾ ಸುದ್ದಿಗಾರರಿಗೆ ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಇದು ಉಗ್ರರ ಅತಿದೊಡ್ಡ ಶರಣಾಗತಿ ಎಂದು ಹೇಳಿದ್ದಾರೆ.