ಕರ್ನಾಟಕ

karnataka

ETV Bharat / bharat

ಮೋಸದಿಂದ ಉದ್ಯೋಗ ಪಡೆದ ಯುಪಿಯ 64 ಜನರ ವಜಾ - ಮಿರ್ಜಾಪುರದ ಮುಖ್ಯ ವೈದ್ಯಾಧಿಕಾರಿ ಒಪಿ ತಿವಾರಿ

ಸರ್ಕಾರದ ನಿರ್ದೇಶನದ ಮೇರೆಗೆ, ಆರೋಗ್ಯ ಇಲಾಖೆಯಲ್ಲಿ ಮೋಸದ ಮೂಲಕ ಉದ್ಯೋಗ ಪಡೆದ 64 ಜನರನ್ನು ವಜಾಗೊಳಿಸಲಾಗಿದೆ ಮತ್ತು ಈ ಸಂಬಂಧ ಪತ್ರಗಳನ್ನು ಪ್ರಸ್ತುತ ಜಿಲ್ಲೆಗಳ ಸಿಎಂಒಗಳಿಗೆ ಕಳುಹಿಸಲಾಗಿದೆ ಎಂದು ತಿವಾರಿ ಶನಿವಾರ ತಿಳಿಸಿದ್ದಾರೆ.

64 people who got jobs fraudulently in health dept dismissed
ಯುಪಿ: ಮೋಸದಿಂದ ಉದ್ಯೋಗ ಪಡೆದ 64 ಜನರನ್ನು ವಜಾ

By

Published : Jun 14, 2020, 3:31 PM IST

ಮಿರ್ಜಾಪುರ (ಯುಪಿ) :ಮಿರ್ಜಾಪುರದ ಮುಖ್ಯ ವೈದ್ಯಾಧಿಕಾರಿ ಒಪಿ ತಿವಾರಿ ಸುಮಾರು ಎರಡು ದಶಕಗಳ ಹಿಂದೆ ತಪ್ಪು ಮಾರ್ಗ ಬಳಸಿ ಆರೋಗ್ಯ ಇಲಾಖೆಯಲ್ಲಿ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾದ 64 ಜನರನ್ನು ವಜಾ ಮಾಡಿದ್ದಾರೆ.

ಸರ್ಕಾರದ ನಿರ್ದೇಶನದ ಮೇರೆಗೆ ಆರೋಗ್ಯ ಇಲಾಖೆಯಲ್ಲಿ ಮೋಸದ ಮೂಲಕ ಉದ್ಯೋಗ ಪಡೆದ 64 ಜನರನ್ನು ವಜಾಗೊಳಿಸಲಾಗಿದೆ ಮತ್ತು ಈ ಸಂಬಂಧ ಪತ್ರಗಳನ್ನು ಪ್ರಸ್ತುತ ಜಿಲ್ಲೆಗಳ ಸಿಎಂಒಗಳಿಗೆ ಕಳುಹಿಸಲಾಗಿದೆ ಎಂದು ತಿವಾರಿ ಶನಿವಾರ ತಿಳಿಸಿದ್ದಾರೆ.

ಮೋಸದ ವಿಧಾನಗಳು ಮತ್ತು ನಕಲಿ ದಾಖಲೆಗಳ ಮೂಲಕ ಸರ್ಕಾರಿ ಉದ್ಯೋಗಗಳನ್ನು ಪಡೆದಿರುವ ಇವರ ಬಗ್ಗೆ ಕಳೆದ 18 ವರ್ಷಗಳಿಂದ ವಿಚಾರಣೆ ನಡೆಯುತ್ತಿದೆ ಮತ್ತು ಈ ವರ್ಷ ಜೂನ್ 10ರಂದು ಆರ್ಥಿಕ ಅಪರಾಧ ವಿಭಾಗ, ವಾರಣಾಸಿಯ ವರದಿಯನ್ನು ಸಲ್ಲಿಸಿದ ನಂತರ ಅವರನ್ನು ವಜಾಗೊಳಿಸಲು ಸರ್ಕಾರ ಆದೇಶಿಸಿದೆ ಎಂದು ಸಿಎಂಒ ಹೇಳಿದರು.

ABOUT THE AUTHOR

...view details