ನವದೆಹಲಿ :ಪ್ರಸ್ತುತ ದೇಶದಲ್ಲಿ 21 ಸಾವಿರ ವೆಂಟಿಲೇಟರ್‌ಗಳಿವೆ. ಜೂನ್ ಅಂತ್ಯದ ವೇಳೆಗೆ ಪಿಎಂ-ಕೇರ್ಸ್ ನಿಧಿಯ ಮೂಲಕ ಸುಮಾರು 60 ಸಾವಿರ ವೆಂಟಿಲೇಟರ್‌ಗಳು ಲಭ್ಯವಾಗಲಿವೆ ಎಂದು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಹೇಳಿದ್ದಾರೆ.
ಲಾಕ್‌ಡೌನ್ ಘೋಷಿಸಿದಾಗ ನಮ್ಮಲ್ಲಿ ಯಾವುದೇ ಮೀಸಲಾದ ಕೋವಿಡ್-19 ಆಸ್ಪತ್ರೆಗಳು ಇರಲಿಲ್ಲ. ಇಂದು ನಮ್ಮಲ್ಲಿ 1,000 ಕೋವಿಡ್-19 ಆಸ್ಪತ್ರೆ ಮತ್ತು 2 ಲಕ್ಷ ಕೋವಿಡ್-19 ರೋಗಿಗಳಿಗೆ ಮೀಸಲಾದ ಹಾಸಿಗೆಗಳಿವೆ. ನಮ್ಮಲ್ಲಿ 21 ಸಾವಿರ ವೆಂಟಿಲೇಟರ್‌ಗಳಿವೆ. ಜೂನ್ ಅಂತ್ಯದ ವೇಳೆಗೆ ಪಿಎಂ-ಕೇರ್ಸ್ ನಿಧಿಯ ಮೂಲಕ ಸುಮಾರು 60 ಸಾವಿರ ವೆಂಟಿಲೇಟರ್‌ಗಳು ಲಭ್ಯವಾಗಲಿವೆ ಎಂದು ಉತ್ತರಪ್ರದೇಶ ಜನಸಂವಾದ ವರ್ಚುವಲ್ ರ‍್ಯಾಲಿಯಲ್ಲಿ ತಿಳಿಸಿದ್ದಾರೆ.