ಲಖನೌ(ಉತ್ತರ ಪ್ರದೇಶ): ಉತ್ತರಪ್ರದೇಶದಲ್ಲಿ ತಪಾಸಣೆ ನಡೆಸಿದ ನಂತರ ಲಖನೌ ಮೂಲದ 157 ಮಂದಿ ಸೇರಿದಂತೆ 600 ಕ್ಕೂ ಹೆಚ್ಚು ತಬ್ಲಿಘಿ ಜಮಾತ್ ಸದಸ್ಯರನ್ನು ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಳಿದ ತಬ್ಲಿಘಿಗಳನ್ನು ತಮ್ಮ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ನಂತರ ಬಿಡುಗಡೆ ಮಾಡಲಾಗುವುದು ಎಂದು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅವನೀಶ್ ಅವಸ್ಥಿ ತಿಳಿಸಿದ್ದಾರೆ. ಪ್ರಯಾಣದ ನಿಯಮಗಳು ಮತ್ತು ಇತರ ವಿಷಯಗಳ ಉಲ್ಲಂಘನೆ ಕಾರಣದಿಂದ ಬಂಧನಕ್ಕೊಳಗಾದ ತಬ್ಲಿಘಿಗಳಿಗೆ ಜಾಮೀನು ದೊರೆತ ನಂತರವೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.