ಕರ್ನಾಟಕ

karnataka

ETV Bharat / bharat

6 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಂದು ಗೋಣಿ ಚೀಲದಲ್ಲಿ ತುಂಬಿದ ಸಂಬಂಧಿ! - ರಾಂಚಿ ಬಾಲಕಿ ಅತ್ಯಾಚಾರ ಮತ್ತು ಕೊಲೆ,

6 ವರ್ಷದ ಬಾಲಕಿ ಮೇಲೆ ಸಂಬಂಧಿಯೊಬ್ಬ ಅತ್ಯಾಚಾರವೆಸಗಿ ಕೊಲೆ ಮಾಡಿ ಗೋಣಿ ಚೀಲದಲ್ಲಿ ತುಂಬಿ ಬಿಸಾಡಿರುವ ಘಟನೆ ಜಾರ್ಖಂಡ್​ ರಾಜಧಾನಿ ರಾಂಚಿಯಲ್ಲಿ ನಡೆದಿದೆ.

6 year old girl rape and murder, 6 year old girl rape and murder in ranchi, Ranchi girl rape and murder, Ranchi girl rape and murder news, 6 ವರ್ಷದ ಬಾಲಕಿ ಅತ್ಯಾಚಾರ ಕೊಲೆ, ರಾಂಚಿಯಲ್ಲಿ 6 ವರ್ಷದ ಬಾಲಕಿ ಅತ್ಯಾಚಾರ ಕೊಲೆ, ರಾಂಚಿ ಬಾಲಕಿ ಅತ್ಯಾಚಾರ ಮತ್ತು ಕೊಲೆ, ರಾಂಚಿ ಬಾಲಕಿ ಅತ್ಯಾಚಾರ ಮತ್ತು ಕೊಲೆ ಸುದ್ದಿ,
ಸಂಗ್ರಹ ಚಿತ್ರ

By

Published : Oct 9, 2020, 10:46 AM IST

ರಾಂಚಿ:ಸಂಬಂಧಿಯೊಬ್ಬ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದಲ್ಲದೆ ಆಕೆಯ ದೇಹವನ್ನು ಗೋಣಿ ಚೀಲದಲ್ಲಿ ತುಂಬಿ ಬಿಸಾಡಿರುವ ಘಟನೆ ರಾಂಚಿಯಲ್ಲಿ ನಡೆದಿದೆ.

ಘಟನೆ ಹಿನ್ನೆಲೆ...

ಗುರುವಾರದಂದು ಆಟವಾಡಲು ತೆರಳಿದ್ದ ಬಾಲಕಿ ಸಂಜೆಯಾದ್ರೂ ಮನೆಗೆ ಹಿಂತಿರುಗದಿದ್ದಾಗ ಆಕೆಯ ಪೋಷಕರು ಮತ್ತು ಸಂಬಂಧಿಗಳು ಹುಡುಕಾಟ ಪ್ರಾರಂಭಿಸಿದರು. ಆದ್ರೆ ಯಾವುದೇ ಪ್ರಯೋಜನವಾಗಲಿಲ್ಲ.

ಗೋಣಿ ಚೀಲದಲ್ಲಿತ್ತು ಬಾಲಕಿಯ ಮೃತದೇಹ...

ಬಾಲಕಿಯ ಅಜ್ಜನಿಗೆ ಮನೆಯಿಂದ ಸುಮಾರು 50 ಮೀಟರ್​ ದೂರದಲ್ಲೊಂದು ಗೋಣಿ ಚೀಲ ಕಂಡಿದೆ. ಆ ಗೋಣಿ ಚೀಲವನ್ನು ಬಿಚ್ಚಿ ನೋಡಿದಾಗ ಬೆತ್ತಲಾದ ಸ್ಥಿತಿಯಲ್ಲಿ ಮೊಮ್ಮಗಳ ಮೃತದೇಹ ಪತ್ತೆಯಾಗಿದೆ. ಇದನ್ನು ನೋಡಿದ ಬಾಲಕಿ ಅಜ್ಜ ಶಾಕ್​ ಆಗಿದ್ದಾರೆ.

ಆರೋಪಿಗೆ ಥಳಿತ...

28 ವರ್ಷದ ಆರೋಪಿ ಬಾಲಕಿಯನ್ನು ಕರೆದುಕೊಂಡು ಹೋಗಿರುವುದನ್ನು ಸಂಬಂಧಿಕರು ನೋಡಿದ್ದಾರೆ. ಹೀಗಾಗಿ ಆರೋಪಿಯನ್ನು ಹಿಡಿದು ಸ್ಥಳೀಯರು ಮತ್ತು ಕುಟುಂಬಸ್ಥರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.

ಪೊಲೀಸರು ಹೇಳಿದ್ದು ಹೀಗೆ...

28 ವರ್ಷದ ಆರೋಪಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ಬಳಿಕ ಸಾಕ್ಷ್ಯ ನಾಶ ಮಾಡಲು ಬಾಲಕಿಯ ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿ ಮುಳ್ಳಿನ ಕಂಟಿಯಲ್ಲಿ ಎಸೆದಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ರಾತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details