ಚೆನ್ನೈ (ತಮಿಳುನಾಡು):ಲಾರಿ ಮತ್ತು ಟಾಟಾ ಸುಮೊ ನಡುವೆ ಸಂಭವಿಸಿದ ಅಪಘಾತದಲ್ಲಿ ಟಾಟಾ ಸುಮೋದಲ್ಲಿದ್ದ ಬಿಹಾರದ ನಾಲ್ವರು ಕಾರ್ಮಿಕರು ಸೇರಿ ಒಟ್ಟು 6 ಮಂದಿ ದುರ್ಮರಣ ಹೊಂದಿದ್ದಾರೆ.
ರಸ್ತೆ ಅಪಘಾತ: ಬಿಹಾರದ ನಾಲ್ವರು ಕಾರ್ಮಿಕರು ಸೇರಿ 6 ಮಂದಿ ದುರ್ಮರಣ - ಲಾರಿ ಮತ್ತು ಟಾಟಾ ಸುಮೊ ನಡುವೆ ಅಪಘಾತ
ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಕಾರ್ಮಿಕರು ಸೇರಿ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಿಹಾರದ ನಾಲ್ವರು ಕಾರ್ಮಿಕರು ಸೇರಿ 6 ಮಂದಿ ದುರ್ಮರಣ
ಇಲ್ಲಿನ ನಮಕ್ಕಲ್ ಜಿಲ್ಲೆಯಲ್ಲಿ ಈ ಅಪಘಾತದಲ್ಲಿ ಸಂಭವಿಸಿದ್ದು, ಟಾಟಾ ಸುಮೋದಲ್ಲಿದ್ದ 6 ಮಂದಿಯೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಿಹಾರ ಮೂಲದ ಧರ್ಮ, ಬಬ್ಲೂ, ಕುಮಾರ್ ಮತ್ತು ಸತೀಶ್ ಮೃತಪಟ್ಟ ಕಾರ್ಮಿಕರಾಗಿದ್ದಾರೆ.
ನಮಕ್ಕಲ್ ಪೊಲೀಸ್ ವರಿಷ್ಠಾಧಿಕಾರಿ ಅರುಲರಸು ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ, ಅಪಘಾತಕ್ಕೆ ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ.
Last Updated : Mar 14, 2020, 10:37 AM IST