ಕರ್ನಾಟಕ

karnataka

ETV Bharat / bharat

ಅರುಣಾಚಲ ಪ್ರದೇಶದಲ್ಲಿ ಎನ್‌ಕೌಂಟರ್‌:  ಆರು NSCN ಬಂಡುಕೋರರ ಹತ್ಯೆ - ನ್ಯಾಷನಲಿಸ್ಟ್​ ಕೌನ್ಸಿಲ್​​ ಆಫ್​ ನಾಗಾಲ್ಯಾಂಡ್

ಅಸ್ಸೋಂ ರೈಫಲ್ಸ್ ಮತ್ತು ಅರುಣಾಚಲ ಪ್ರದೇಶ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆರು ಎನ್‌ಎಸ್‌ಸಿಎನ್ ಪ್ರತ್ಯೇಕತಾವಾದಿಗಳನ್ನು ಹತ್ಯೆ ಮಾಡಲಾಗಿದೆ.

NSCN
ಎನ್‌ಎಸ್‌ಸಿಎನ್​​

By

Published : Jul 11, 2020, 11:06 AM IST

Updated : Jul 11, 2020, 11:32 AM IST

ಇಟಾನಗರ: ಅರುಣಾಚಲ ಪ್ರದೇಶದ ಲಾಂಗ್ಡಿಂಗ್ ಜಿಲ್ಲೆಯಲ್ಲಿ ಬಂಡುಕೋರರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಎನ್‌ಎಸ್‌ಸಿಎನ್​​ನ (ಐಎಂ) ಆರು ಸದಸ್ಯರನ್ನು ಹತ್ಯೆ ಮಾಡಲಾಗಿದ್ದು, ಓರ್ವ ಯೋಧ ಗಾಯಗೊಂಡಿದ್ದಾರೆ.

ಇಂದು ಮುಂಜಾನೆ ಅಸ್ಸೋಂ ರೈಫಲ್ಸ್ ಮತ್ತು ಅರುಣಾಚಲ ಪ್ರದೇಶ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆಯಾದ ಪ್ರತ್ಯೇಕತಾವಾದಿಗಳ ಬಳಿ ನಾಲ್ಕು ಎಕೆ -47 ರೈಫಲ್ ಮತ್ತು ಎರಡು ಚೀನೀ ಎಂಕ್ಯೂ ಅನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಮುಂದುವರೆದಿದೆ ಎಂದು ಎಂದು ಅರುಣಾಚಲ ಪ್ರದೇಶದ ಡಿಜಿಪಿ ಆರ್‌ಪಿ ಉಪಾಧ್ಯಾಯ ಮಾಹಿತಿ ನೀಡಿದ್ದಾರೆ.

ಎನ್‌ಎಸ್‌ಸಿಎನ್:

ನ್ಯಾಷನಲಿಸ್ಟ್​ ಕೌನ್ಸಿಲ್​​ ಆಫ್​ ನಾಗಾಲ್ಯಾಂಡ್​ (NSCN), ಇದೊಂದು ನಾಗಾಲ್ಯಾಂಡ್​ನ ಪ್ರತ್ಯೇಕತಾವಾದಿ ಗುಂಪಾಗಿದ್ದು, ಮುಖ್ಯವಾಗಿ ಭಾರತದ ಈಶಾನ್ಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ನಾಗಾಲ್ಯಾಂಡ್‌ನ ನಿಷೇಧಿತ ಉಗ್ರ ಸಂಘಟನೆ ಕೂಡ ಆಗಿದೆ.

Last Updated : Jul 11, 2020, 11:32 AM IST

ABOUT THE AUTHOR

...view details