ಕರ್ನಾಟಕ

karnataka

ETV Bharat / bharat

ರಾಜ್ಯದ ಕೈಗಾರಿಕೆಗಳಲ್ಲಿನ 6 ಲಕ್ಷ ಸಿಬ್ಬಂದಿ ತಮ್ಮ ಕೆಲಸ ಪುನರಾರಂಭಿಸಿದ್ದಾರೆ: ಮಹಾ ಸಚಿವ - ಮುಂಬೈ

ಮಹಾರಾಷ್ಟ್ರದ 25 ಸಾವಿರ ಕೈಗಾರಿಕೆಗಳು ಮತ್ತೆ ಕೆಲಸ ಪ್ರಾರಂಭಿಸಿವೆ. ಈ 25 ಸಾವಿರ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 6 ಲಕ್ಷ ಜನರು ಮತ್ತೆ ಕೆಲಸಕ್ಕೆ ಬಂದಿದ್ದಾರೆ.

6 lakh staff in 25k firms have resumed work: Maha minister
ರಾಜ್ಯದಲ್ಲಿ 6 ಲಕ್ಷ ಸಿಬ್ಬಂದಿ ತಮ್ಮ ಕೆಲಸ ಪುನರಾರಂಭಿಸಿದ್ದಾರೆ

By

Published : May 11, 2020, 10:35 PM IST

ಮುಂಬೈ: ಕೊರೊನಾ ಪರಿಣಾಮ ಏಕಾಏಕಿ ಲಾಕ್​ಡೌನ್​ ಹೇರಿ ಈಗ ಸಡಿಲಿಕೆ ಮಾಡಲಾಗಿದ್ದು, ಈ ಮಧ್ಯೆ ವಿವಿಧ ಕ್ಷೇತ್ರಗಳಲ್ಲಿ ಸುಮಾರು ಆರು ಲಕ್ಷ ಜನರು ತಮ್ಮ ಕೆಲಸ ಪುನರಾರಂಭಿಸಿದ್ದಾರೆ ಎಂದು ಮಹಾರಾಷ್ಟ್ರದ ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ ಹೇಳಿದ್ದಾರೆ.

ಮಹಾರಾಷ್ಟ್ರದ 25 ಸಾವಿರ ಕಂಪನಿಗಳು ಮತ್ತೆ ಕೆಲಸ ಪ್ರಾರಂಭಿಸಿವೆ. ಈ 25 ಸಾವಿರ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 6 ಲಕ್ಷ ಜನರು ಮತ್ತೆ ಕೆಲಸಕ್ಕೆ ಬಂದಿದ್ದಾರೆ. ಪಶ್ಚಿಮ ಮಹಾರಾಷ್ಟ್ರದಲ್ಲಿ ಮಾತ್ರ 9,147 ಕೈಗಾರಿಕೆಗಳಿಗೆ ಕೆಲಸ ಪುನರಾರಂಭಿಸಲು ಅನುಮತಿ ನೀಡಲಾಗಿದೆ. ಈ ಪೈಕಿ ಒಟ್ಟು 5,774 ಜನರು ಈಗಾಗಲೇ ಕೆಲಸ ಪುನರಾರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮುಂಬೈ, ಥಾಣೆ, ಪುಣೆ ಮತ್ತು ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ಕೈಗಾರಿಕೆಗಳ ಪ್ರದೇಶದಲ್ಲಿ ಕೋವಿಡ್​ ಪ್ರಮಾಣ ಹೆಚ್ಚಾಗಿ ಇರುವುದರಿಂದ ಇಲ್ಲಿನ ಕೈಗಾರಿಕೆಗಳಿಗೆ ಅನುಮತಿ ನೀಡಲಾಗಿಲ್ಲ. ನಾವು ಮತ್ತೆ ಇಲ್ಲಿ ಅನುಮತಿ ನೀಡುವುದರ ಮುಖಾಂತರ ತೊಂದರಗೆ ಸಿಲುಕಲು ಸಾಧ್ಯವಿಲ್ಲ ಎಂದಿದ್ದಾರೆ.

ABOUT THE AUTHOR

...view details