ಬೆತುಲ್ (ಮಧ್ಯಪ್ರದೇಶ ): ನಿಯಂತ್ರಣ ಕಳೆದುಕೊಂಡ ಟ್ರಕ್ವೊಂದು ನದಿಗೆ ಉರುಳಿ ಬಿದ್ದ ಪರಿಣಾಮ ಚಾಲಕ ಹಾಗೂ ಐವರು ಕಾರ್ಮಿಕರು ಮೃತಪಟ್ಟ ಘಟನೆ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯಲ್ಲಿ ನಡೆದಿದೆ.
ಸೇತುವೆ ಮೇಲಿಂದ ನದಿಗೆ ಉರುಳಿ ಬಿದ್ದ ಟ್ರಕ್: 5 ಮಂದಿ ಸಾವು - ಸೇತುವೆಯಿಂದ ನದಿಗೆ ಉರುಳಿದ ವಾಹನ
ಕಬ್ಬಿಣದ ಸರಳುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಟ್ರಕ್ವೊಂದು ನಿಯಂತ್ರಣ ಕಳೆದುಕೊಂಡು ನದಿಗೆ ಬಿದ್ದಿದೆ. ಪರಿಣಾಮ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ. ಬೆತುಲ್ ಎಂಬ ಜಿಲ್ಲಾ ಕೇಂದ್ರದಿಂದ 50 ಕಿ.ಮೀ. ದೂರದಲ್ಲಿ ಈ ಅಪಘಾತ ಸಂಭವಿಸಿದೆ.
![ಸೇತುವೆ ಮೇಲಿಂದ ನದಿಗೆ ಉರುಳಿ ಬಿದ್ದ ಟ್ರಕ್: 5 ಮಂದಿ ಸಾವು 6 killed as truck falls off river bridge in Madhya Pradesh](https://etvbharatimages.akamaized.net/etvbharat/prod-images/768-512-9569852-64-9569852-1605617718639.jpg)
ಸೇತುವೆಯಿಂದ ನದಿಗೆ ಉರುಳಿದ ವಾಹನ
ಜಿಲ್ಲೆಯ ತವಾ ನದಿಯ ಸೇತುವೆ ಮೇಲೆ ಕಬ್ಬಿಣದ ಸರಳುಗಳನ್ನು ತುಂಬಿಕೊಂಡು ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡ ಟ್ರಕ್ ನದಿಗೆ ಉರುಳಿ ಬಿದ್ದಿದೆ. ಪರಿಣಾಮ ದುರಂತದಲ್ಲಿ ಚಾಲಕ ಹಾಗೂ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಜಿಲ್ಲಾ ಕೇಂದ್ರದಿಂದ 50 ಕಿ.ಮೀ. ದೂರದಲ್ಲಿರುವ ಕಥಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕ್ರೇನ್ ಮೂಲಕ ಟ್ರಕ್ನಡಿ ಸಿಕ್ಕಿಬಿದ್ದ ಮೃತದೇಹಗಳನ್ನು ಹೊರತೆಗೆದು ಘೋಡಡೋಂಗ್ರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
Last Updated : Nov 17, 2020, 10:15 PM IST