ಕರ್ನಾಟಕ

karnataka

ETV Bharat / bharat

ಕಂದಕಕ್ಕೆ ಉರುಳಿ ಬಿದ್ದ ಬಸ್; 6 ಸಾವು 39 ಜನರಿಗೆ ಗಾಯ - Kannada news

ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 6 ಮಂದಿ ಮೃತಪಟ್ಟಿದ್ದು, 39 ಜನರು ಗಾಯಗೊಂಡಿದ್ದಾರೆ.

ಕಂದಕಕ್ಕೆ ಬಿದ್ದ ಬಸ್.

By

Published : Jun 25, 2019, 8:17 AM IST

ಜಾರ್ಖಂಡ್: ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 6 ಮಂದಿ ಮೃತಪಟ್ಟ ಘಟನೆ ಜಾರ್ಖಂಡ್‌ನ ಗರ್ಹ್ವಾದಲ್ಲಿ ಸಂಭವಿಸಿದೆ.

ಕಂದಕಕ್ಕೆ ಬಿದ್ದ ಬಸ್

ಜಾರ್ಖಂಡ್​ನ ಗರ್ಹಾದಲ್ಲಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ ಕಂದಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಬಸ್‌ನಲ್ಲಿದ್ದ 6 ಮಂದಿ ಪ್ರಯಾಣಿಕರು ಮೃತಪಟ್ಟಿದ್ದು, 39 ಜನರು ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಮುಂದುವರೆದಿದ್ದು ಸಾವುನೋವು ಹೆಚ್ಚಾಗುವ ಸಾಧ್ಯತೆ ಇದೆ.

ಘಟನೆಗೆ ಕಾರಣವೇನು ಎನ್ನುವುದು ಸದ್ಯ ತಿಳಿದು ಬಂದಿಲ್ಲ.

ಇತ್ತೀಚೆಗೆ ಹಿಮಾಚಲಪ್ರದೇಶದ ಕುಲುವಿನಲ್ಲೂ ಬಸ್‌ ಕಂದಕಕ್ಕೆ ಉರುಳಿಬಿದ್ದ ದುರಂತ ನಡೆದಿದ್ದು, 44ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.

ABOUT THE AUTHOR

...view details