ಚಂಡೀಗಢ: ಹೆಚ್ಚುತ್ತಿರುವ ಕೊರೊನಾ ಸೋಂಕಿಗೆ ಪಂಜಾಬ್ ಸರ್ಕಾರ ನೂತನ ನೀತಿಯೊಂದನ್ನು ಜಾರಿಗೆ ತಂದಿದೆ. ಕೈದಿಗಳಿಗಾಗಿ 6 ಜೈಲುಗಳನ್ನು ವಿಶೇಷ ಜೈಲುಗಳಾಗಿ ಪರಿವರ್ತಿಸಿದೆ.
ಕೊರೊನಾ ಹೋರಾಟಕ್ಕೆ ಸಿದ್ಧವಾದ 6 ವಿಶೇಷ ಜೈಲುಗಳು: ಪಂಜಾಬ್ ಸರ್ಕಾರದ ನೂತನ ಪ್ಲಾನ್! - RANDHAWA
ಕೊರೊನಾ ವಿರುದ್ಧ ಸಿಎಂ ಪ್ರಾರಂಭಿಸಿದ 'ಮಿಷನ್ ಫತೇಹ್' ಅಭಿಯಾನದಡಿಯಲ್ಲಿ ಪರಿಣಾಮಕಾರಿಯಾಗಿ ಕೊರೊನಾ ಎದುರಿಸಲು ಜೈಲು ಇಲಾಖೆಯು ಈ ನೀತಿಯನ್ನು ಅಳವಡಿಸಿಕೊಂಡಿದೆ.
ಗುರುದಾಸ್‌ಪುರ ಮತ್ತು ಮಲೆರ್ಕೊಟ್ಲಾದ ಎರಡು ಜೈಲುಗಳನ್ನು ಕೋವಿಡ್ ಸೋಂಕಿತ ಕೈದಿಗಳಿಗಾಗಿ ಕೋವಿಡ್ ಕೇರ್ ಸೆಂಟರ್ ಎಂದು ಘೋಷಿಸಲಾಗಿದೆ. ಈ ಬಗ್ಗೆ ಜೈಲು ಸಚಿವ ಸುಖ್ಜಿಂದರ್ ಸಿಂಗ್ ರಾಂಧವಾ ಅವರು ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇನ್ನು ಕೊರೊನಾ ವಿರುದ್ಧ ಸಿಎಂ ಪ್ರಾರಂಭಿಸಿದ 'ಮಿಷನ್ ಫತೇಹ್' ಅಭಿಯಾನದಡಿಯಲ್ಲಿ ಪರಿಣಾಮಕಾರಿಯಾಗಿ ಕೊರೊನಾ ಎದುರಿಸಲು ಜೈಲು ಇಲಾಖೆಯು ಈ ನೀತಿಯನ್ನು ಅಳವಡಿಸಿಕೊಂಡಿದೆ. ಈ ಮುಖಾಂತರ ಪಂಜಾಬ್‌ನ ಆರು ಜೈಲುಗಳನ್ನು ಕ್ವಾರಂಟೈನ್ ಜೈಲುಗಳಾಗಿ ಪರಿವರ್ತಿಸಲಾಗಿದೆ. ಮೊದಲ ಹಂತದಲ್ಲಿ ಬರ್ನಾಲಾ ಮತ್ತು ಪ್ಯಾಟಿ ಜೈಲುಗಳನ್ನು ಕ್ವಾರಂಟೈನ್ ಜೈಲುಗಳಾಗಿ ಪರಿವರ್ತಿಸಲಾಗಿದೆ.
ಇನ್ನುಳಿದಂತೆ ಬತಿಂಡಾ, ಪಠಾಣ್‌ಕೋಟ್, ಲುಧಿಯಾನ ಮತ್ತು ಮಹಿಳಾ ವಿಭಾಗದ ಲುಧಿಯಾ ಜೈಲುಗಳು ಈಗ ಕೊರೊನಾ ಹೋರಾಟಕ್ಕೆ ಸಜ್ಜುಗೊಂಡಿವೆ. ಹೊಸ ಖೈದಿಗಳನ್ನು ಮೊದಲು ಈ ಜೈಲುಗಳಿಗೆ ಕಳುಹಿಸಲಾಗುತ್ತದೆ. ಅಲ್ಲಿ ಪೂರ್ಣ ತಪಾಸಣೆಗೊಂಡ ಬಳಿಕ ಅವರನ್ನು 14 ದಿನಗಳವರೆಗೆ ಕ್ವಾರಂಟೈನ್ನಲ್ಲಿ ಇರಿಸಲಾಗುತ್ತದೆ. ಪರೀಕ್ಷೆಯ ನಂತರ ಮತ್ತೇ ಈ ಕೈದಿಗಳನ್ನು ಸಂಗ್ರೂರ್ ಜೈಲಿಗೆ ಕಳುಹಿಸಲಾಗುತ್ತದೆ.ಅವರ ವರದಿಗಳು ನೆಗೆಟಿವ್ ಬಂದರೆ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರನ್ನು ಇತರ ಜೈಲುಗಳಿಗೆ ಸ್ಥಳಾಂತರಿಸಲಾಗುತ್ತದೆ. ಪಂಜಾಬ್‌ನಲ್ಲಿ ಒಟ್ಟು 25 ಜೈಲುಗಳು ಇದ್ದು, 23,500 ಕೈದಿಗಳ ಸಾಮರ್ಥ್ಯವನ್ನು ಹೊಂದಿವೆ. ಈ ಜೈಲುಗಳಲ್ಲಿ ಪ್ರಸ್ತುತ 17,000 ಕೈದಿಗಳಿದ್ದಾರೆ ಎಂದು ಜೈಲು ಸಚಿವರು ವಿವರಿಸಿದ್ದಾರೆ.