ಕರ್ನಾಟಕ

karnataka

ETV Bharat / bharat

ಒಂದಲ್ಲ ಎರಡಲ್ಲ ಬರೋಬ್ಬರಿ 6 ಅಡಿಗಳ ಬಾಳೆಗೊನೆ ಬೆಳೆದ ಆಂಧ್ರ ರೈತ

ಪೂರ್ವ ಗೋದಾವರಿಯ ದುರ್ಗದ ಎಂಬಲ್ಲಿ ರೈತನೊರ್ವ 6 ಅಡಿಯಷ್ಟು ಉದ್ದವಾದ ಬಾಳೆಗೊನೆಯನ್ನು ಬೆಳೆದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಬಾಳೆಗೊನೆಯನ್ನು ಸದ್ಯ ಸ್ಥಳೀಯ ಅಮ್ಮಾ ದೇವಸ್ಥಾನಕ್ಕೆ ಕಾಣಿಕೆಯಾಗಿ ನೀಡಿದ್ದಾರೆ.

6-feet-tall-bunch-of-bananas-in-andhra-pradesh-east-godavari-district
ಬರೋಬ್ಬರಿ 6 ಅಡಿಗಳ ಬಾಳೆಗೊನೆ ಬೆಳೆದ ಆಂಧ್ರ ರೈತ

By

Published : Sep 7, 2020, 5:07 PM IST

ಪೂರ್ವ ಗೋದಾವರಿ (ಆಂಧ್ರಪ್ರದೇಶ): ಬಾಳೆಗೊನೆ ಸಾಮಾನ್ಯವಾಗಿ 3 ರಿಂದ 4 ಅಡಿಯಷ್ಟು ಇರುತ್ತದೆ. ಆದರೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ದುರ್ಗದ ಎಂಬಲ್ಲಿ ರೈತನೊರ್ವ ಬರೋಬ್ಬರಿ 6 ಅಡಿಯಷ್ಟು ಉದ್ದವಾದ ಬಾಳೆಗೊನೆಯನ್ನು ಬೆಳೆದು ಅಚ್ಚರಿ ಮೂಡಿಸಿದ್ದಾನೆ.

ಸದ್ಯ ಈ ಬಾಳೆಗೊನೆಯನ್ನು ದುರ್ಗದ ಅಮ್ಮಾ ದೇವಸ್ಥಾನಕ್ಕೆ ಕಾಣಿಕೆಯಾಗಿ ನೀಡಿದ್ದಾರೆ. ಅತಿ ಉದ್ದವಾಗಿ ಬಾಳೆಕೊನೆ ಬಿಟ್ಟಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ಲಿನ ತೋಟಗಾರಿಕೆ ಇಲಾಖೆ, ಹೆಚ್ಚಾದ ಪೋಷಕಾಂಶಗಳಿಂದ ಹೀಗೆ ಗೊನೆ ಬಿಟ್ಟಿರಬಹುದು ಎಂದು ಅಂದಾಜಿಸಿದ್ದಾರೆ. ಅದೇನೇ ಇರಲಿ ಇಷ್ಟೊಂದು ಉದ್ದದ ಬಾಳೆಗೊನೆಯನ್ನು ಕಂಡು ದೇವಾಸ್ಥಾನಕ್ಕೆ ಬರುವ ಭಕ್ತರ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details