ಕರ್ನಾಟಕ

karnataka

ETV Bharat / bharat

ಪಂಜಾಬ್​ನಿಂದ ವಿವಿಧ ರಾಜ್ಯಗಳಿಗೆ ತೆರಳಲು 6 ಲಕ್ಷಕ್ಕೂ ಅಧಿಕ ವಲಸಿಗರಿಂದ ನೋಂದಣಿ - migrants stuck in Punjab

ಲಾಕ್ ಡೌನ್ ಕಾರಣ ರಾಜ್ಯದ ವಿವಿಧ ಭಾಗಗಳಲ್ಲಿ ಸಿಲುಕಿರುವ ವಲಸಿಗರು ಊರಿಗೆ ತೆರಳಲು ಬಯಸಿದರೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಕೋರಲಾಗಿತ್ತು. ಈಗಾಗಲೇ 6 ಲಕ್ಷಕ್ಕೂ ಅಧಿಕ ಜನ ನೋಂದಣಿ ಮಾಡಿದ್ದಾರೆ ಎಂದು ಪಂಜಾಬ್ ರಾಜ್ಯ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

6.44 lakh stranded migrants in Punjab wish to return to their homes
ಪಂಜಾಬ್​ನಿಂದ ವಿವಿಧ ರಾಜ್ಯಗಳಿಗೆ ತೆರಳಲು 6 ಲಕ್ಷಕ್ಕೂ ಅಧಿಕ ವಲಸಿಗರಿಂದ ನೋಂದಣಿ

By

Published : May 4, 2020, 9:49 AM IST

ಚಂಡೀಗಢ :ಲಾಕ್ ಡೌನ್​ನಿಂದಾಗಿ ಪಂಜಾಬ್​ನ ವಿವಿಧ ಭಾಗಗಳಲ್ಲಿ ಸಿಲುಕಿರುವ ಸುಮಾರು 6 ಲಕ್ಷಕ್ಕೂ ಅಧಿಕ ವಲಸಿಗರು ಊರಿಗೆ ತೆರಳಲು ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಸರ್ಕಾರದ ಅಧಿಕಾರಿಗಳು, ಊರಿಗೆ ತೆರಳಲು ಅರ್ಜಿ ಸಲ್ಲಿಸಿದವರಲ್ಲಿ ಹೆಚ್ಚಿನವರು ಬಿಹಾರ, ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ನ ವಲಸೆ ಕಾರ್ಮಿಕರಿದ್ದಾರೆ. ರಾಜ್ಯದಲ್ಲಿ ಒಟ್ಟು 10 ಲಕ್ಷ ವಲಸೆ ಕಾರ್ಮಿಕರಿದ್ದು, ಆ ಪೈಕಿ 7 ಲಕ್ಷ ಜನ ಲೂಧಿಯಾನದಲ್ಲೇ ಇದ್ದಾರೆ. ಊರಿಗೆ ತೆರಳಲು ಬಯಸುವವರು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಕೋರಿತ್ತು. ಈಗಾಗಲೇ 6,44,378 ವಲಸಿಗರು ನೋಂದಾವಣೆ ಮಾಡಿದ್ದಾರೆ ಎಂದು ತಿಳಿಸಿದರು.

ಸರ್ಕಾರದ ಅಂಕಿ ಅಂಶಗಳ ಪ್ರಕಾರ ಈಗಾಗಲೇ ನೋಂದಾಯಿಸಿದ ವಲಸಿಗರಲ್ಲಿ 3.43 ಲಕ್ಷ ಜನ ಉತ್ತರ ಪ್ರದೇಶ, 2.35 ಲಕ್ಷ ಜನ ಬಿಹಾರ ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದವರು 10 ಸಾವಿರ ಜನ ಮತ್ತು ಜಮ್ಮು ಮತ್ತು ಕಾಶ್ಮೀರದವರು 5 ಸಾವಿರ ಜನರಿದ್ದಾರೆ. ಇನ್ನುಳಿದಂತೆ, ಅಂಡಮಾನ್ ಮತ್ತು ನಿಕೋಬಾರ್, ಅರುಣಾಚಲ ಪ್ರದೇಶ, ದಾದ್ರಾ ಮತ್ತು ನಗರ ಹವೇಲಿ, ಗೋವಾ, ನಾಗಾಲ್ಯಾಂಡ್, ಸಿಕ್ಕಿಂ, ಪುದುಚೇರಿ ಹಾಗೂ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತೆರಳಲು ಜನ ನೋಂದಾವಣೆ ಮಾಡಿದ್ದಾರೆ.

ಈ ವಾರದ ಆರಂಭದಲ್ಲಿ, ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ) ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಬಸ್‌ಗಳಲ್ಲಿ ಅಥವಾ ವಿಶೇಷ ರೈಲುಗಳಲ್ಲಿ ಮರಳಿ ತೆರಳಲು ಅವಕಾಶ ನೀಡಿತ್ತು.

ABOUT THE AUTHOR

...view details