ರಾಜಸ್ಥಾನ/ನವದೆಹಲಿ: ಬಹುಜನ ಸಮಾಜ ಪಾರ್ಟಿ ಪಕ್ಷದ ಆರು ಶಾಸಕರು ತಮ್ಮ ನಾಯಕಿ ಮಾಯಾವತಿಗೆ ಶಾಕ್ ಕೊಟ್ಟು ಕೆಲ ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷ ಸೇರಿದ್ದರು. ಈಗ ಆ ಆರು ಶಾಸಕರಿಗೆ ಕಾಂಗ್ರೆಸ್ ತನ್ನ ಸದಸ್ಯತ್ವ ನೀಡಿದೆ.
ಬಿಎಸ್ಪಿಗೆ ಶಾಕ್ ಕೊಟ್ಟ ಆರು ಶಾಸಕರಿಗೆ ಕಾಂಗ್ರೆಸ್ ಸದಸ್ಯತ್ವ! - 6 BSP MLAs take membership,
ಬಿಎಸ್ಪಿಗೆ ಶಾಕ್ ಕೊಟ್ಟು ಪಕ್ಷ ಬಿಟ್ಟಿದ್ದ ಆರು ಶಾಸಕರಿಗೆ ಕಾಂಗ್ರೆಸ್ ಸದಸ್ಯತ್ವ ನೀಡಿದೆ.
![ಬಿಎಸ್ಪಿಗೆ ಶಾಕ್ ಕೊಟ್ಟ ಆರು ಶಾಸಕರಿಗೆ ಕಾಂಗ್ರೆಸ್ ಸದಸ್ಯತ್ವ! 6 BSP MLA, 6 BSP MLAs take membership, 6 BSP MLAs take membership of Congress, ಆರು ಬಿಎಸ್ಪಿ ಶಾಸಕರು, ಆರು ಬಿಎಸ್ಪಿ ಶಾಸಕರಿಗೆ ಸದಸ್ಯತ್ವ, ಆರು ಬಿಎಸ್ಪಿ ಶಾಸಕರಿಗೆ ಕಾಂಗ್ರೆಸ್ ಸದಸ್ಯತ್ವ,](https://etvbharatimages.akamaized.net/etvbharat/prod-images/768-512-5582097-552-5582097-1578051147406.jpg)
ಹೌದು, ಸೆಪ್ಟೆಂಬರ್ 17 ರಂದು ರಾಜೇಂದ್ರ ಸಿಂಗ್ ಗುಡಾ, ಜೋಗೇಂದ್ರ ಸಿಂಗ್ ಆವಾನಾ, ವಾಜಿಬ್ ಅಲಿ, ಲಖನ್ ಸಿಂಗ್ ಮೀಣಾ, ಸಂದೀಪ್ ಯಾದವ್ ಮತ್ತು ದೀಪಚಂದ್ ಆರು ಶಾಸಕರು ಬಿಎಸ್ಪಿ ತೊರೆದು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಅವೀನಾಶ್ ಪಾಂಡೆ ನೇತೃತ್ವದಲ್ಲಿ ಪಕ್ಷ ಸೇರಿದ್ದರು.
ಇನ್ನು ಈ ಆರು ಶಾಸಕರು ಕಾಂಗ್ರೆಸ್ ಪಕ್ಷ ಸೇರಿದ್ದರೂ ಕಾಂಗ್ರೆಸ್ ಸದಸ್ಯತ್ವ ನೀಡಿರಲಿಲ್ಲ. ಇತ್ತೀಚೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಅವೀನಾಶ್ ಪಾಂಡೆ ಭೇಟಿ ಮಾಡಿದ್ದರು. ಭೇಟಿ ಬಳಿಕ ಜ.03 ರಂದು ಬಿಎಸ್ಪಿ ಆರು ಶಾಸಕರಿಗೂ ಕಾಂಗ್ರೆಸ್ ತನ್ನ ಸದಸ್ಯತ್ವವನ್ನು ನೀಡಿದೆ.