ಮುಂಬೈ (ಮಹಾರಾಷ್ಟ್ರ):ಹದಿ ಹರೆಯದ ಮಕ್ಕಳು ದಾರಿ ತಪ್ಪಿದಾಗ ತಿದ್ದಿ ಬುದ್ದಿ ಹೇಳಬೇಕಾದ ವ್ಯಕ್ತಿಯೇ ಇಲ್ಲಿ ದಾರಿ ತಪ್ಪಿದ್ದಾನೆ. ಅನ್ಯಾಯದ ಕೆಲಸಕ್ಕೆ ಕೈ ಹಾಕಿರುವ ಈತ ಇದೀಗ ಕಂಬಿ ಹಿಂದೆ ಕಾಲ ಕಳೆಯುವಂತಾಗಿದೆ. ಮುಂಬೈನಲ್ಲಿ 19 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ 57 ವರ್ಷದ ವ್ಯಕ್ತಿಯ ಕತೆ ಈಗ ಮಾಡಿದ್ದುಣ್ಣೋ ಮಹರಾಯ ಎನ್ನುವಂತಾಗಿದೆ.
60ರ ಅಜ್ಜನಿಂದ ಮೊಮ್ಮಗಳಂಥಾ ಹುಡುಗಿ ಮೇಲೆ ಲೈಂಗಿಕ ದೌರ್ಜನ್ಯ! - 19 ವರ್ಷದ ಬಾಲಕಿಗೆ 57 ವರ್ಷದ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ
57 ವರ್ಷದ ವ್ಯಕ್ತಿ 19ರ ಹರೆಯದ ಯುವತಿ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಮುಂಬೈ ಪೊಲೀಸರ ಪ್ರಕಾರ, ಈ ವ್ಯಕ್ತಿ 2018ರಿಂದ ಈ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದು, ಯಾರಿಗೂ ಈ ಬಗ್ಗೆ ಹೇಳದಂತೆ ಬೆದರಿಕೆ ಒಡ್ಡಿದ್ದನಂತೆ. ಇದೇ ಫೆಬ್ರವರಿ 10ರಂದು ಆ ಯುವತಿ ಈ ಬಗ್ಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಳು. ಹೀಗಾಗಿ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Last Updated : Feb 13, 2020, 12:55 PM IST