ಕರ್ನಾಟಕ

karnataka

ETV Bharat / bharat

ಉತ್ತರ ಪ್ರದೇಶ ಜೈಲಿನಿಂದ 57 ವಿದೇಶಿ ತಬ್ಲಿಘಿಗಳ ಬಿಡುಗಡೆ - ಜೈಲಿನಿಂದ ಬಿಡುಗಡೆಯಾದ ತಬ್ಲಿಘಿಗಳು

ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಬಂಧಿತರಾಗಿದ್ದ 57 ವಿದೇಶಿ ತಬ್ಲಿಘಿಗಳ ಶಿಕ್ಷೆಯ ಅವಧಿ ಮುಗಿದಿದ್ದು, ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.

57 foreign Tablighis freed
57 ವಿದೇಶಿ ತಬ್ಲಿಘಿಗಳ ಬಿಡುಗಡೆ

By

Published : Jun 13, 2020, 9:49 PM IST

ಸಹರಾನ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಒಂದೂವರೆ ತಿಂಗಳ ಕಾಲ ಜೈಲಿನಲ್ಲಿದ್ದ ಒಟ್ಟು 57 ವಿದೇಶಿ ತಬ್ಲಿಘಿ ಜಮಾತ್ ಸದಸ್ಯರನ್ನು ನ್ಯಾಯಾಲಯದ ಆದೇಶದಂತೆ ಬಿಡುಗಡೆ ಮಾಡಲಾಗಿದೆ.

ಕಿರ್ಗಿಸ್ತಾನ್, ಬಾಂಗ್ಲಾದೇಶ ಮತ್ತು ಥೈಲ್ಯಾಂಡ್‌ ದೇಶಗಳಿಂದ ಬಂದ ತಬ್ಲಿಘಿಗಳನ್ನು ಸಹರಾನ್‌ಪುರ ಜಿಲ್ಲಾ ಜೈಲಿನಲ್ಲಿ ಇರಿಸಲಾಗಿತ್ತು. ಈಟಿವಿ ಭಾರತ ಜೊತೆ ಮಾತನಾಡಿದ ತಬ್ಲಿಘಿ ಪರ ವಕೀಲ ಜಾನ್ ನಿಸಾರ್, ಜಿಲ್ಲೆಯ ವಿವಿಧ ಮಸೀದಿಗಳಲ್ಲಿದ್ದ ಇವರನ್ನು ಪೊಲೀಸರು ಬಂಧಿಸಿ ಕರೆ ತಂದಿದ್ದರು. ಇವರ ಮೇಲೆ ಚಾರ್ಜ್​ಶೀಟ್​ ಕೂಡಾ ಸಲ್ಲಿಸಿದ್ದರು.

ಉತ್ತರ ಪ್ರದೇಶ ಜೈಲಿನಿಂದ 57 ವಿದೇಶಿ ತಬ್ಲಿಘಿಗಳು ಬಿಡುಗಡೆ

ಐಪಿಸಿಯ ಸೆಕ್ಷನ್ 188 ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ತಪ್ಪಿತಸ್ಥರೆಂದು ಕಂಡು ಬಂದಿದೆ. ತಬ್ಲಿಘಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡು ಮನೆಗೆ ಕಳುಹಿಸುವಂತೆ ನ್ಯಾಯಾಲಯವನ್ನು ಕೇಳಿಕೊಂಡರು ಎಂದು ಅವರು ಹೇಳಿದರು.

ನ್ಯಾಯಾಲಯ ಇವರಿಗೆ ಒಂದು ತಿಂಗಳ ಕಾಲ ಶಿಕ್ಷೆ ವಿಧಿಸಿತ್ತು. ನಿನ್ನೆ ಬಿಡುಗಡೆಯ ಆದೇಶ ತಲುಪಿದ್ದರಿಂದ ಇಂದು 57 ಸದಸ್ಯರನ್ನು ಬಿಡುಗಡೆ ಮಾಡಲಾಗಿದೆ. ಎಲ್ಲರನ್ನೂ ಖಾಸಗಿ ರೆಸಾರ್ಟ್​ನಲ್ಲಿ ಇರಿಸಲಾಗುವುದು. ಅವರವರ ದೇಶಕ್ಕೆ ತೆರಳಲು ವ್ಯವಸ್ಥೆ ಮಾಡುವವರೆಗೂ ಅಲ್ಲೇ ಉಳಿಯಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details