ಕರ್ನಾಟಕ

karnataka

ETV Bharat / bharat

ಕೊರಾನಾಗೆ ತಮಿಳುನಾಡಲ್ಲಿ ಮೊದಲ ಬಲಿ! - ತಮಿಳುನಾಡಲ್ಲಿ ಸಾವು

ಇಂದು ಮುಂಜಾನೆ ಮಧುರೈನ ರಾಜಾಜಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಸಾವಿಗೀಡಾಗಿದ್ದಾರೆ. ತಮಿಳುನಾಡಿನಲ್ಲಿ ದಾಖಲಾದ ಮೊದಲ ಸಾವು ಇದು ಎಂದು ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ಮಾಹಿತಿ ನೀಡಿದ್ದಾರೆ.

ಕೊರಾನಾಗೆ ತಮಿಳುನಾಡಲ್ಲಿ ಮೊದಲ ಬಲಿ!
ಕೊರಾನಾಗೆ ತಮಿಳುನಾಡಲ್ಲಿ ಮೊದಲ ಬಲಿ!

By

Published : Mar 25, 2020, 9:10 AM IST

ಚೆನ್ನೈ: ಕೊರೊನಾ ವೈರಸ್ ತಮಿಳುನಾಡಿನಲ್ಲಿ ಮೊದಲ ಬಲಿ ಪಡೆದಿದೆ.

ಮಧುರೈನಲ್ಲಿ 54 ವರ್ಷದ ವಯಸ್ಸಿನ ಕೊರೊನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಇಂದು ಮುಂಜಾನೆ ಇಲ್ಲಿನ ರಾಜಾಜಿ ಆಸ್ಪತ್ರೆಯಲ್ಲಿ ಈ ವ್ಯಕ್ತಿ ಸಾವಿಗೀಡಾಗಿದ್ದಾರೆ. ತಮಿಳುನಾಡಿನಲ್ಲಿ ದಾಖಲಾದ ಮೊದಲ ಸಾವು ಇದು ಎಂದು ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ಮಾಹಿತಿ ನೀಡಿದ್ದಾರೆ.

ಅನಿಯಂತ್ರಿತ ಮಧುಮೇಹ ಹಾಗೂ ದೀರ್ಘಕಾಲದ ಅನಾರೋಗ್ಯದಿಂದ ಈ ವ್ಯಕ್ತಿ ಬಳಲುತ್ತಿದ್ದರು ಎನ್ನಲಾಗಿದೆ. ನಿನ್ನೆಯ ಅಂಕಿಅಂಶದ ಪ್ರಕಾರ ರಾಜ್ಯದಲ್ಲಿ ಒಟ್ಟು 18 ಪ್ರಕರಣಗಳು ಕಂಡುಬಂದಿದ್ದವು.

ABOUT THE AUTHOR

...view details