ಕರ್ನಾಟಕ

karnataka

ETV Bharat / bharat

ಒಂದಲ್ಲ, ಎರಡಲ್ಲ, 32 ಅಲ್ವೇ ಅಲ್ಲ... ಏಳರ ಬಾಲಕನ ದವಡೆಯಲ್ಲಿತ್ತು ಇಷ್ಟೊಂದು ಹಲ್ಲುಗಳು...! - 526 ಹಲ್ಲು

ಹಲ್ಲು ನೋವಿನಿಂದ ಆಸ್ಪತ್ರೆಗೆ ದಾಖಲಾದ ಬಾಲಕನನ್ನು ಪರಿಶೀಲಿಸಿದ ವೈದ್ಯರಿಗೆ ಅತಿದೊಡ್ಡ ಅಚ್ಚರಿ ಕಾದಿತ್ತು.. ಮುಂದೆ ಓದಿ...

ಬಾಲಕ

By

Published : Aug 1, 2019, 11:35 AM IST

Updated : Aug 1, 2019, 12:07 PM IST

ಚೆನ್ನೈ:ಓರ್ವ ಆರೋಗ್ಯವಂತ ಮನುಷ್ಯನಲ್ಲಿ 32 ಹಲ್ಲುಗಳಿರುತ್ತವೆ ಎನ್ನುವ ಮಾತು ಸಾಕಷ್ಟು ಬಾರಿ ಕೇಳಿದ್ದೇವೆ. ಆ ಸಂಖ್ಯೆಯಲ್ಲಿ ಕೊಂಚ ಏರುಪೇರಾದರೂ ಅಚ್ಚರಿಯಿಲ್ಲ. ಆದರೆ ಚೆನ್ನೈನ ಬಾಲಕನ ವಿಚಾರದಲ್ಲಿ ಎಲ್ಲವೂ ಉಲ್ಟಾ ಹಾಗೂ ದೊಡ್ಡ ಅಚ್ಚರಿಯೇ ನಡೆದಿದೆ.

ದಂತ ನೋವಿನ ಸಮಸ್ಯೆಯಿಂದ ಏಳು ವರ್ಷದ ಬಾಲಕ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೂಕ್ತ ಸೌಲಭ್ಯವಿಲ್ಲದ ಕಾರಣ ಸಮರ್ಪಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿರಲಿಲ್ಲ.

ಏಳರ ಬಾಲಕನ ದವಡೆಯಿಂದ 526 ಹಲ್ಲು ಹೊರತೆಗೆದ ವೈದ್ಯರು

ಹೀಗಾಗಿ ಬಾಲಕನ ಹೆತ್ತವರು ಪ್ರಸಿದ್ದ ಖಾಸಗಿ ಆಸ್ಪತ್ರೆ ಸವೀತಾ ಡೆಂಟಲ್ ಕಾಲೇಜ್ ಆ್ಯಂಡ್ ಹಾಸ್ಪಿಟಲ್​ ದಾಖಲಿಸುತ್ತಾರೆ. ಏಳರ ಬಾಲಕನಿಗೆ ಸರ್ಜರಿ ನಡೆಸಿದ ವೈದ್ಯರಿಗೆ ಅಚ್ಚರಿ ಕಾದಿತ್ತು. ಬಾಲಕನ ಕೆಳ ದವಡೆ ಭಾಗದಿಂದ ಬರೋಬ್ಬರಿ 526 ಹಲ್ಲುಗಳಿತ್ತು. ಸದ್ಯ ಅಷ್ಟೂ ಹಲ್ಲನ್ನು ವೈದ್ಯರು ಯಶಸ್ವಿಯಾಗಿ ಕಿತ್ತಿದ್ದಾರೆ. ಈ ಶಸ್ತ್ರಚಿಕಿತ್ಸೆಗೆ ಐದು ಗಂಟೆ ತಗುಲಿದೆ.

ಬಾಲಕ ಬಾಯಲ್ಲಿದ್ದ ಹಲ್ಲುಗಳು

ಬಹುತೇಕ ಹಲ್ಲುಗಳ ತೂಕ 200 ಗ್ರಾಂಗಳಿಷ್ಟು ಎಂದು ವೈದ್ಯರು ತಿಳಿಸಿದ್ದಾರೆ. ಬಾಲಕನ ಹೆತ್ತವರ ಆರ್ಥಿಕ ಪರಿಸ್ಥಿತಿ ಅಷ್ಟೇನು ಉತ್ತಮವಾಗಿಲ್ಲದ ಕಾರಣ ಖಾಸಗಿ ಆಸ್ಪತ್ರೆ ವೈದರು ಸಂಪೂರ್ಣ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಿದ್ದಾರೆ. ಸದ್ಯ ಬಾಲಕ ಆರೋಗ್ಯವಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

Last Updated : Aug 1, 2019, 12:07 PM IST

ABOUT THE AUTHOR

...view details