ಮೀರತ್(ಉತ್ತರ ಪ್ರದೇಶ): ಬೆಂಗಳೂರು ಹಿಂಸಾಚಾರ ಪ್ರಕರಣ ಸಂಬಂಧ ವಿವಾದಾತ್ಮಕ ಹೇಳಿಕೆಯೊಂದು ಹೊರಬಿದ್ದಿದೆ. ಶಾಸಕನ ಸೋದರಳಿಯನ ಶಿರಚ್ಛೇದನ ಮಾಡಿದವರಿಗೆ 51 ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ. ಈ ವಿವಾದಿತ ಘೋಷಣೆಯನ್ನು ಮೀರತ್ನ ಶಹಜೇಬ್ ರಿಜ್ವಿ ನೀಡಿದ್ದು, ಮೀರತ್ ಪೊಲೀಸರು ಇಂತಹ ವಿವಾದಾತ್ಮಕ ಹೇಳಿಕೆ ಮೂಲಕ ಕೋಮು ಸೌಹಾರ್ದತೆಗೆ ಭಂಗ ತಂದಿದ್ದಕ್ಕಾಗಿ ಶಹಜೇಬ್ ರಿಜ್ವಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನವೀನ್ ತಲೆಗೆ 51 ಲಕ್ಷ ರೂ ಬಹುಮಾನ : ವಿವಾದಾತ್ಮಕ ಹೇಳಿಕೆ ನೀಡಿದ ರಜ್ವಿ ವಿರುದ್ಧ ಕೇಸ್ - beheading of a lawmaker's nephew
ವಿವಾದಿತ ಪೋಸ್ಟರ್ಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಹಿಂಸಾಚಾರ ನಡೆದಿದ್ದು, ಈಗ ಸಂಘರ್ಷದ ಹೇಳಿಕೆಗಳು ಹೊರ ಬರುತ್ತಿವೆ. ಅಗ್ಗದ ಜನಪ್ರಿಯತೆ ಗಳಿಸುವ ಉದ್ದೇಶದಿಂದ ಮೀರತ್ನ ಮುಖ್ಯಸ್ಥರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೀರತ್ನ ಶಹಜೇಬ್ ರಿಜ್ವಿ ಶಾಸಕನ ಸೋದರಳಿಯನ ಶಿರಚ್ಛೇದ ಮಾಡಿದವರಿಗೆ 51 ಲಕ್ಷ ನಗದು ಬಹುಮಾನವನ್ನು ನೀಡುವುದಾಗಿ ಘೋಷಿಸಿ ಅದರ ವೀಡಿಯೋ ಮಾಡಿ ವೈರಲ್ ಮಾಡಿದ್ದಾನೆ.
ಶಾಸಕನ ಸೋದರಳಿಯನ ಶಿರಚ್ಛೇದಿಸಿದವರಿಗೆ 51 ಲಕ್ಷ ರೂಪಾಯಿ ಬಹುಮಾನ: ಶಹಜೇಬ್ ರಿಜ್ವಿ ವಿವಾದಾತ್ಮಕ ಹೇಳಿಕೆ
ವಿವಾದಿತ ಪೋಸ್ಟರ್ಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಹಿಂಸಾಚಾರ ನಡೆದಿದ್ದು, ಈಗ ಸಂಘರ್ಷದ ಹೇಳಿಕೆಗಳು ಹೊರ ಬರುತ್ತಿವೆ. ಅಗ್ಗದ ಜನಪ್ರಿಯತೆ ಗಳಿಸುವ ಉದ್ದೇಶದಿಂದ ಮೀರತ್ನ ಮುಖ್ಯಸ್ಥರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶಹಜೀಬ್ ರಿಜ್ವಿ ಶಾಸಕನ ಸೋದರಳಿಯನ ಶಿರಚ್ಛೇದ ಮಾಡಿದವರಿಗೆ 51 ಲಕ್ಷ ನಗದು ಬಹುಮಾನವನ್ನು ನೀಡುವುದಾಗಿ ಘೋಷಿಸಿ ಅದರ ವಿಡಿಯೋ ಮಾಡಿ ವೈರಲ್ ಮಾಡಿದ್ದಾನೆ.
ಕೋಮು ಸೌಹಾರ್ದ ಕದಡುವ ಇಂತಹ ಹೇಳಿಕೆ ನೀಡಿರುವ ಹಿನ್ನೆಲೆ ಈಗಾಗಲೇ ಮೀರತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದು, ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.