ಚಮೋಲಿ (ಉತ್ತರಾಖಂಡ): ದೇವಭೂಮಿ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ 1971ರ ದೋಣಿಯೊಂದು ಕಂಡುಬಂದಿದೆ. ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಅವಶೇಷಗಳ ಅಡಿ ಹೂತು ಹೋಗಿದ್ದ ಈ ದೊಣಿ ಇದೀಗ ಪತ್ತೆಯಾಗಿದೆ.
ಇದನ್ನು ನೋಡಿ ಆಶ್ಚರ್ಯಚಕಿತರಾದ ಜನ, ಈ ದೋಣಿ ಬ್ರಿಟಿಷ್ ಕಾಲಕ್ಕೆ ಸೇರಿದ್ದಾಗಿದೆ ಎಂದು ಬಣ್ಣಿಸುತ್ತಿದ್ದಾರೆ.
ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ಇಲ್ಲಿನ ನೈಸರ್ಗಿಕ ಸರೋವರದ ಸೌಂದರ್ಯಕ್ಕೆ ಮಾರುಹೋಗಿ ಬ್ರಿಟಿಷರು ಈ ಸ್ಥಳದಲ್ಲಿ ಬೋಟಿಂಗ್ ಮಾಡುತ್ತಿದ್ದರು. ಬ್ರಿಟಿಷರ ಆಳ್ವಿಕೆಯ ನಂತರ ಇಲ್ಲಿನ ಗ್ರಾಮ, ಸರೋವರ ಮತ್ತು ಪ್ರವಾಸೋದ್ಯಮ ನಿರ್ಲಕ್ಷಿಸಲಾಯಿತು. 1971ರ ನೈಸರ್ಗಿಕ ವಿಕೋಪದಲ್ಲಿ ಈ ಕೊಳ ಹಾನಿಗೊಳಗಾಗಿತ್ತು.
5 ಕಿಲೋಮೀಟರ್ ಉದ್ದವಿದ್ದ ಸರೋವರದಲ್ಲಿ ಸಾಕಷ್ಟು ದೋಣಿಗಳಿದ್ದವು. ಸಾವಿರಾರು ಪ್ರವಾಸಿಗರು ದೋಣಿವಿಹಾರ ಮಾಡುತ್ತಿದ್ದರು. ಇಲ್ಲಿ ಒಂದು ಬೋಟ್ ಹೌಸ್ ಇದ್ದು, ಅದರಲ್ಲಿ ಅನೇಕ ದೋಣಿಗಳನ್ನು ಇರಿಸಲಾಗಿತ್ತು. ಅವುಗಳು 1971ರ ಪ್ರವಾಹದಲ್ಲಿ ಮುಳುಗಿದ್ದವು.