ಕರ್ನಾಟಕ

karnataka

ETV Bharat / bharat

ಪಾಕ್‌ನಿಂದ ರಾವಿ ನದಿ ಮೂಲಕ ಹೆರಾಯಿನ್‌ ಸಾಗಾಟ; ಅಕ್ರಮ ಪತ್ತೆ ಹಚ್ಚಿದ ಬಿಎಸ್‌ಎಫ್ - ಗುರುದಾಸ್​ಪುರ್​ ಬಳಿ ಬಿಎಸ್​​ಎಫ್​ನಿಂದ ಹೆರಾಯಿನ್​ ವಶ

ಪಂಜಾಬ್​ನ ಡೇರಾ ಬಾಬಾ ನಾನಕ್ ಬಳಿಯ ರಾವಿ ನದಿಯಲ್ಲಿ ಪಾಕಿಸ್ತಾನದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಮಾದಕ ದ್ರವ್ಯ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ.

Heroin seized by BSF in Gurdaspur
ಹೆರಾಯಿನ್ ವಶಪಡಿಸಿಕೊಂಡ ಬಿಎಸ್​ಎಫ್​

By

Published : Jul 19, 2020, 5:12 PM IST

ಗುರುದಾಸ್​ಪುರ್​ (ಪಂಜಾಬ್) : ಪಾಕಿಸ್ತಾನದಿಂದ ಕಳ್ಳದಾರಿಯ ಮೂಲಕ ಸಾಗಾಟ ಮಾಡಲಾಗುತ್ತಿದ್ದ 60 ಕೆ.ಜಿ ಹೆರಾಯಿನ್​ ಅನ್ನು ಗಡಿ ಭದ್ರತಾ ಪಡೆ (ಬಿಎಸ್​ಎಫ್)​ ಪತ್ತೆ ಹಚ್ಚಿದೆ.

ಪಂಜಾಬ್​ನ ಡೇರಾ ಬಾಬಾ ನಾನಕ್ ಬಳಿಯ ರಾವಿ ನದಿಯಲ್ಲಿ ಪೈಪ್​ನೊಳಗೆ ಹಾಕಿ ಹಗ್ಗದ ಸಹಾಯದಿಂದ ಭಾರತ ಗಡಿಯೊಳಗೆ ತೇಲಿ ಬಿಟ್ಟಿದ್ದ ಮಾದಕ ದ್ರವ್ಯವನ್ನು ಬಿಎಸ್​ಎಫ್​ನ 10ನೇ ಬೆಟಾಲಿಯನ್ ವಶಪಡಿಸಿಕೊಂಡಿದೆ. ಸೇನೆ ಪತ್ತೆ ಹಚ್ಚಿರುವ ಅತೀ ದೊಡ್ಡ ಕಳ್ಳ ಸಾಗಾಣಿಕೆಯಲ್ಲಿ ಇದು ಕೂಡ ಒಂದು ಎಂದು ಹೇಳಲಾಗ್ತಿದೆ.

ಹೆರಾಯಿನ್ ವಶಪಡಿಸಿಕೊಂಡ ಬಿಎಸ್​ಎಫ್​

ಈ ಕುರಿತು ಪ್ರತಿಕ್ರಿಯಿಸಿರುವ ಬಿಎಸ್​ಎಫ್​ ಡಿಐಜಿ ರಾಜೇಶ್ ಶರ್ಮಾ, ಪಾಕಿಸ್ತಾನವು 60 ಪ್ಯಾಕೇಟ್​ ಹೆರಾಯಿನ್​ಅನ್ನು ಪ್ಲಾಸ್ಟಿಕ್ ಪೈಪ್​ನಲ್ಲಿ ಹಾಕಿ ರವಿ ನದಿ ಮೂಲಕ ಡೇರಾ ಬಾಬಾ ನಾನಕ್​ಗೆ ಸಾಗಿಸಲು ಯತ್ನಿಸುತ್ತಿತ್ತು. ಬಿಎಸ್​ಎಫ್​ ಸಿಬ್ಬಂದಿ ಈ ಅಕ್ರಮವನ್ನು ಪತ್ತೆ ಹಚ್ಚಿ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details