ಕರ್ನಾಟಕ

karnataka

ETV Bharat / bharat

ಅರ್ಧಶತಕ ಬಾರಿಸಿದ ಮೋದಿ 2.0... ವಿದೇಶಿ ನೀತಿ, ನೆರೆಯ ದೇಶದ ಸಂಬಂಧ ವೃದ್ಧಿಗೆ ಹೆಚ್ಚಿನ ಒತ್ತು - ನರೇಂದ್ರ ಮೋದಿ

ಎರಡನೇ ಅವಧಿಯಲ್ಲಿ ಪ್ರಧಾನಿ ಮೋದಿ ವಿದೇಶಿ ನೀತಿ ಹಾಗೂ ನೆರೆಯ ದೇಶಗಳೊಂದಿಗೆ ಸಂಬಂಧ ವೃದ್ಧಿಗೆ ಹೆಚ್ಚಿನ ಆಸ್ಥೆ ವಹಿಸುತ್ತಿರುವುದು ಆರಂಭದ 50 ದಿನಗಳಲ್ಲಿ ಸ್ಪಷ್ಟವಾಗಿದೆ.

ಮೋದಿ

By

Published : Jul 22, 2019, 1:36 PM IST

Updated : Jul 22, 2019, 1:44 PM IST

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಮೋದಿ ಸರ್ಕಾರ ಇದೀಗ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ.

2ನೇ ಅವಧಿಯಲ್ಲಿ ಪ್ರಧಾನಿ ಮೋದಿ ವಿದೇಶಿ ನೀತಿ ಹಾಗೂ ನೆರೆಯ ದೇಶಗಳೊಂದಿಗೆ ಸಂಬಂಧ ವೃದ್ಧಿಗೆ ಹೆಚ್ಚಿನ ಆಸ್ಥೆ ವಹಿಸುತ್ತಿರುವುದು ಆರಂಭದ 50 ದಿನದಲ್ಲಿ ಸ್ಪಷ್ಟವಾಗಿದೆ.

ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ವಿದೇಶಿ ಪ್ರವಾಸವಾಗಿ ಮಾಲ್ಡೀವ್ಸ್​​ಗೆ ತೆರಳಿದ್ದ ಪ್ರಧಾನಿ ಮೋದಿ, ಅಲ್ಲಿನ ಸಂಸತ್ತಿನಲ್ಲಿ ಭಾಷಣ ಮಾಡಿದ್ದರು. ಜೊತೆಗೆ ಉಭಯ ದೇಶಗಳ ಸಂಬಂಧ ವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಇದೇ ವೇಳೆ, ನೆರೆಯ ಶ್ರೀಲಂಕಾಗೂ ಭೇಟಿ ನೀಡಿದ್ದ ಪ್ರಧಾನಿ ಮೋದಿ ಭಯೋತ್ಪಾದನೆ ನಿರ್ಮೂಲನೆ ಭಾರತದ ಬೆಂಬಲ ಸದಾ ಇರಲಿದೆ ಎಂದು ಭರವಸೆ ನೀಡಿದ್ದರು.

ಶಾಂಘೈ ಶೃಂಗಸಭೆಯ ನಿಮಿತ್ತ ಕಿರ್ಗಿಸ್ತಾನದ ಬಿಶ್ಕೆಕ್​​ ಪ್ರವಾಸ ಮಾಡಿದ್ದ ಮೋದಿ ಅಮೆರಿಕ ಅಧ್ಯಕ್ಷ ಟ್ರಂಪ್ ಸೇರಿದಂತೆ ಹಲವು ಜಾಗತಿಕ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು. ಜಪಾನ್​ನಲ್ಲಿ ನಡೆದ ಜಿ-20 ಸಮ್ಮೇಳನದಲ್ಲಿ ಸಹ ಪ್ರಧಾನಿ ಮೋದಿ ಅಲ್ಲಿಯೂ ಗಣ್ಯ ನಾಯಕರನ್ನು ಭೇಟಿ ಮಾಡಿದ್ದರು.

ತಮ್ಮ ಸರ್ಕಾರ 50 ದಿನ ಪೂರೈಸುತ್ತಿರುವ ವೇಳೆಯೇ ಮೋದಿ ಭೂತಾನ್ ಪ್ರವಾಸಕ್ಕೆ ಸಜ್ಜಾಗುತ್ತಿದ್ದಾರೆ. ಮುಂದಿನ ತಿಂಗಳ ಆರಂಭದಲ್ಲಿ ಪ್ರಧಾನಿ ಮೋದಿ ನೆರೆಯ ಭೂತಾನ್​ಗೆ ಭೇಟಿ ನೀಡುವ ಸಾಧ್ಯತೆ ಇದೆ.

Last Updated : Jul 22, 2019, 1:44 PM IST

ABOUT THE AUTHOR

...view details