ಕರ್ನಾಟಕ

karnataka

ETV Bharat / bharat

ಮಾನಸಿಕ ಖಿನ್ನತೆ: 5 ವರ್ಷದ ಮಗನನ್ನೇ ಹತ್ಯೆಗೈದಳು ಹೆತ್ತವ್ವ! - ಮಗನ ಕೊಂದ ತಾಯಿ

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ತಾಯಿಯೋರ್ವಳು 5 ವರ್ಷದ ಮಗ ಆಡಿದ ಸಣ್ಣ ಮಾತಿನಿಂದ ಕುಪಿತಗೊಂಡು, ಆತನನ್ನು ಕೊಲೆ ಮಾಡಿದ್ದಾಳೆ.

boy killed by mentally disturbed mother
ಮಗನನ್ನೇ ಹತ್ಯೆಗೈದ ಹೆತ್ತ ತಾಯಿ

By

Published : Jun 10, 2020, 7:44 PM IST

ಪ್ರಯಾಗರಾಜ್(ಉತ್ತರ ಪ್ರದೇಶ): ಮಾನಸಿಕ ಖಿನ್ನತೆಗೆ ಒಳಗಾದ ಮಹಿಳೆಯೋರ್ವಳು ತನ್ನ ಐದು ವರ್ಷದ ಮಗನನ್ನೇ ಹತ್ಯೆಗೈದ ಘಟನೆ ನಗರದಲ್ಲಿ ನಡೆದಿದೆ.

ಐದು ವರ್ಷದ ಮಗ ತಾಯಿಯೊಂದಿಗೆ ಮಾತನಾಡುವ ಸಂದರ್ಭದಲ್ಲಿ ಯಾವುದೋ ವಿಷಯ ಪ್ರಸ್ತಾಪಿಸಿದ್ದಾನೆ. ಇದರಿಂದ ಕುಪಿತಗೊಂಡ ತಾಯಿ ಕೂಡಲೇ ಮಗನನ್ನು ಕೊಲೆ ಮಾಡಿದ್ದಾಳೆ.

ಈ ಘಟನೆ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details