ಶ್ರೀನಗರ:ಗಣರಾಜ್ಯೋತ್ಸವ ದಿನದ ವೇಳೆ ಜಮ್ಮು-ಕಾಶ್ಮೀರದಲ್ಲಿ ಭಾರೀ ದಾಳಿಗೆ ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನ ಪೊಲೀಸರು ಬಂಧಿಸಿದ್ದು, ಅವರಿಂದ ಸ್ಫೋಟಕ ವಸ್ತು ವಶಕ್ಕೆ ಪಡೆದುಕೊಂಡಿದ್ದಾರೆ.
ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಈ ಸಂಚು ರೂಪಿಸಿದ್ದು, ಅವರು ಹಾಕಿಕೊಂಡಿದ್ದ ಮಾಸ್ಟರ್ ಪ್ಲಾಸ್ ವಿಫಲಗೊಳಿಸಿರುವುದಾಗಿ ಶ್ರೀನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತರನ್ನ ಎಜಾಝ್ ಅಹ್ಮದ್ ಶೇಕ್, ಉಮರ್ ಹಮೀದ್ ಶೇಕ್, ಇಮ್ತಿಯಾಜ್ ಅಹ್ಮದ್ ಚಿಕ್ಲಾ, ಸಾಹಿಲ್ ಫಾರೂಖ್ ಗೋಜ್ರಿ ಮತ್ತು ನಾಸೀರ್ ಅಹ್ಮದ್ ಮೀರ್ ಎಂದು ಗುರುತಿಸಲಾಗಿದ್ದು, ಇವರಿಂದ ಅಪಾರ ಪ್ರಮಾಣದ ಸ್ಫೋಟಕ ವಶಪಡಿಸಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಡಿಐಜಿ ವಿಕೆ ಬಿರ್ಡಿ, ದೊಡ್ಡ ಮಟ್ಟದ ದಾಳಿ ನಡೆಸಲು ಸಂಚು ಹಾಕಿದ್ದ ಐವರು ಭಯೋತ್ಪಾದಕರ ಬಂಧನ ಮಾಡಲಾಗಿದ್ದು, ಅವರಿಂದ ಅಪಾರ ಪ್ರಮಾಣದ ಸ್ಫೋಟಕ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಫೆಬ್ರುವರಿಯಲ್ಲಿ ನಡೆದ ಪುಲ್ವಾಮಾ ದಾಳಿಯಲ್ಲೂ ಈ ಉಗ್ರ ಸಂಘಟನೆ ಕೈವಾಡವಿತ್ತು. ದಾಳಿಯಲ್ಲಿ ಬರೋಬ್ಬರಿ 40 ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು.