ಕರ್ನಾಟಕ

karnataka

ಮದುವೆಗೋ, ಮಸಣಕೋ... ಭೀಕರ ಕಾರು ಅಪಘಾತದಲ್ಲಿ ಐವರು ದುರ್ಮರಣ, ಐವರ ಸ್ಥಿತಿ ಗಂಭೀರ

By

Published : Nov 29, 2019, 12:04 PM IST

ತಡರಾತ್ರಿ  ಉತ್ತರ ಪ್ರದೇಶದ ಫಿಲಿಬಿತ್​ ಜಿಲ್ಲೆಯಲ್ಲಿ ನಡೆದಿರುವ ಭಯಾನಕ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೈದು ಮಂದಿ ಗಂಭೀರವಾಗಿದ್ದಾರೆ.

Dangerous car accident in philibith, ಉತ್ತರ ಪ್ರದೇಶ ಭೀಕರ ಕಾರು ಅಪಘಾತ
ಪಿಲಿಭಿತ್: ಭೀಕರ ಕಾರು ಅಪಘಾತ; ಐವರು ಮೃತ, ಐವರು ಗಂಭೀರ

ಉತ್ತರ ಪ್ರದೇಶ: ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ಪರಿವಾರವೊಂದು ಅಪಘಾತಕ್ಕೀಡಾಗಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೈದು ಮಂದಿ ಗಂಭೀರವಾಗಿರುವ ದುರ್ಘಟನೆ ಉತ್ತರ ಪ್ರದೇಶದ ಫಿಲಿಬಿತ್​ ಜಿಲ್ಲೆಯಲ್ಲಿ ನಡೆದಿದೆ.

ಪಿಲಿಭಿತ್: ಭೀಕರ ಕಾರು ಅಪಘಾತ; ಐವರು ಮೃತ, ಐವರು ಗಂಭೀರ

ತಡರಾತ್ರಿ ಉತ್ತರ ಪ್ರದೇಶದ ಫಿಲಿಬಿತ್​ ಜಿಲ್ಲೆಯಲ್ಲಿ ನಡೆದಿರುವ ಭಯಾನಕ ಅಪಘಾತದಲ್ಲಿ ಮೃತಪಟ್ಟವರು ಹಾಗೂ ಗಾಯಾಳುಗಳು ಪೂರನ್​ಪುರದ ಕೋತ್ವಾಲಿಯ ಜೋಶಿ ಕಾಲೋನಿ ನಿವಾಸಿಗಳು ಎಂದು ತಿಳಿದುಬಂದಿದೆ. ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಜಿಲ್ಲೆಯಲ್ಲಿ ಭಾರೀ ಮಳೆ ಗಾಳಿ ಹಿನ್ನಲೆ ವಾತಾವರಣ ಹದಗೆಟ್ಟಿದ್ದ ಹಿನ್ನಲೆ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಐವರು ಸ್ಥಳದಲ್ಲಿ ಸಾವನ್ನಪ್ಪಿದ್ಧಾರೆ. ಜೊತೆಗೆ ಇನ್ನೂ ಐವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಇನ್ನೂ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಗಾಯಾಳುಗಳ ಸ್ಥಿತಿ ತೀರಾ ಗಂಭೀರವಾಗಿದ್ದರಿಂದ ಅವರನ್ನು ತಕ್ಷಣ ಬರೇಲಿಯ ದೊಡ್ಡಾಸ್ಪತ್ರೆಗೆ ದಾಖಲಿಸುವಂತೆ ತಿಳಿಸಲಾಗಿದೆ.

ABOUT THE AUTHOR

...view details