ಧನ್ಬಾದ್(ಜಾರ್ಖಂಡ್): ಧನ್ಬಾದ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ಐವರು ಮೃತಪಟ್ಟಿದ್ದಾರೆ.
ಸೇತುವೆ ಮೇಲಿಂದ ನದಿಗೆ ಬಿದ್ದ ಕಾರು... 2 ವರ್ಷದ ಮಗು ಸೇರಿ ಐವರು ಸಾವು - ಸೇತುವೆ ಮೇಲಿಂದ ನದಿಗೆ ಬಿದ್ದ ಕಾರು
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಸೇತುವೆಯಿಂದ ನದಿಗೆ ಬಿದ್ದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಜಾರ್ಖಂಡ್ನ ಧನ್ಬಾದ್ ಜಿಲ್ಲೆಯಲ್ಲಿ ಬಳಿ ನಡೆದಿದೆ.
ಸೇತುವೆ ಮೇಲಿಂದ ನದಿಗೆ ಬಿದ್ದ ಕಾರು.
ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕುಡಿಯಾ ಬ್ರಿಡ್ಜ್ ಮೇಲಿಂದ ಕಾರು ನದಿಗೆ ಬಿದ್ದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿ ಮೂವರು ಪುರುಷರು, ಓರ್ವ ಮಹಿಳೆ ಮತ್ತು 2 ವರ್ಷದ ಮಗು ಇದ್ದರು ಎಂದು ತಿಳಿದು ಬಂದಿದೆ.
ನದಿಯಿಂದ ಎಲ್ಲಾ ಐದು ಜನರ ಮೃತದೇಹ ಹೊರ ತೆಗೆಯಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.