ಅಪ್ರಚೋದಿತ ಗುಂಡಿನ ದಾಳಿ: ಐವರು ಪಾಕ್ ಸೈನಿಕರನ್ನು ಬೇಟೆಯಾಡಿದ ಯೋಧರು
Five Pakistani soldiers were killed and three injured in retaliatory firing by India along LoC. Firing exchanges between the two sides lasted for 2 hours.
09:04 December 11
ಎಲ್‌ಒಸಿ ಬಳಿ ಪಾಕ್ ಸೇನೆ ಅಪ್ರಚೋದಿನ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಯೋಧರು ಐವರು ಪಾಕ್ ಸೈನಿಕರ ಹೆಡೆಮುರಿ ಕಟ್ಟುವ ಮೂಲಕ ತಕ್ಕ ಪ್ರತ್ಯತ್ತರ ನೀಡಿದ್ದಾರೆ.
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಎಲ್‌ಒಸಿ ಉದ್ದಕ್ಕೂ ಭಾರತೀಯ ಸೇನೆ ಮತ್ತು ಪಾಕ್ ಸೈನಿಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆ ಐವರು ಪಾಕಿಸ್ತಾನಿ ಸೈನಿಕರನ್ನು ಬೇಟೆಯಾಡಿದೆ.
ಉಭಯ ಸೇನೆಗಳ ನಡುವೆ ಸುಮಾರು 2 ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆಯಿತು ಎಂದು ಸೇನಾ ಮೂಲಗಳು ತಿಳಿಸಿವೆ. ಈ ವೇಳೆ ಐವರು ಪಾಕ್ ಸೈನಿಕರು ಸಾವನ್ನಪ್ಪಿದ್ದು ಮೂವರು ಗಾಯಗೊಂಡಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಪೂಂಚ್ ಜಿಲ್ಲೆಯ ಎಲ್‌ಒಸಿಯ ಮಂಕೋಟೆ ಸೆಕ್ಟರ್‌ನಲ್ಲಿ ಸಾರ್ವಜನಿಕ ಆಸ್ತಿಯನ್ನ ಗುರಿಯಾಗಿಸಿಕೊಂಡು ಪಾಕಿಸ್ತಾನ ಸೇನೆಯು ಅಪ್ರಚೋದಿತ ಗುಂಡಿನ ದಾಳಿ ಮತ್ತು ಶೆಲ್ ದಾಳಿ ನಡೆಸಿತು. ಇದರಿಂದ ನಾಗರೀಕರ ಆಸ್ತಿಗೆ ಹಾನಿಯುಂಟಾಗಿದೆ ಎಂದು ತಿಳಿದು ಬಂದಿದೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಪ್ರತಿದಾಳಿ ನಡೆಸಿ ಐವರು ಪಾಕಿಸ್ತಾನಿ ಸೈನಿಕರನ್ನು ಸದೆಬಡಿಯುವ ಜೊತೆಗೆ ಅವರ ಬಂಕರ್ಗಳನ್ನ ಕೂಡ ನಾಶಪಡಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.