ಶ್ರೀನಗರ: ಪಶ್ಚಿಮ ಬಂಗಾಳದಿಂದ ಕೆಲಸಗಾರರಾಗಿ ಬಂದಿದ್ದ ಐವರನ್ನು ಉಗ್ರರು ಕೊಂದು ಹಾಕಿದ್ದಾರೆ. ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಒಬ್ಬ ಕೆಲಸಗಾರ ಮಾರಣಾಂತಿಕವಾಗಿ ಗಾಯಗೊಂಡಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿದ್ದಾನೆ.
ಕುಲ್ಗಾಂನಲ್ಲಿ ಉಗ್ರರ ಅಟ್ಟಹಾಸ: ಐವರು ವಲಸಿಗ ಕೆಲಸಗಾರರ ಮೇಲೆ ದಾಳಿ: ಹತ್ಯೆ - ಪಶ್ಚಿಮ ಬಂಗಾಳದ ಕೆಲಸಗಾರರ ಮೇಲೆ ಉಗ್ರ ದಾಳಿ
ಪಶ್ಚಿಮ ಬಂಗಾಳದಿಂದ ಕೆಲಸಗಾರರಾಗಿ ಬಂದಿದ್ದ ಐವರನ್ನು ಉಗ್ರರು ಕೊಂದು ಹಾಕಿದ್ದಾರೆ. ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಒಬ್ಬ ಕೆಲಸಗಾರ ಮಾರಣಾಂತಿಕವಾಗಿ ಗಾಯಗೊಂಡಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿದ್ದಾನೆ.
ಕೊಲ್ಲಲ್ಪಟ್ಟಿರುವ ಐವರು ಪಶ್ಚಿಮ ಬಂಗಾಳ ಮುರ್ಶಿದಾಬಾದ್ ಜಿಲ್ಲೆಯವರು ಎಂದು ತಿಳಿದು ಬಂದಿದೆ. ಯುರೋಪಿಯನ್ ಯೂನಿಯನ್ನ ನಿಯೋಗ ಕಾಶ್ಮೀರದಲ್ಲಿನ ಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡಲು ಬಂದಾಗಲೇ ಈ ಹತ್ಯೆಗಳು ನಡೆದಿರುವುದು ಕಳವಳಕಾರಿ ಅಂಶ ಎನ್ನಲಾಗಿದೆ. ಕಳೆದ ಆಗಸ್ಟ್ನಲ್ಲಿ ಕೇಂದ್ರ ಸರ್ಕಾರ ಜಮ್ಮು - ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನ ತೆಗೆದು ಹಾಕಿ ಜಮ್ಮು- ಕಾಶ್ಮೀರ ಹಾಗೂ ಲಡಾಖ್ ಗಳನ್ನ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಾಗಿಸಲಾಗಿತ್ತು.
ಉಗ್ರರು ವಿಶೇಷವಾಗಿ ಲಾರಿಗಳು ಹಾಗೂ ಅದರಲ್ಲಿರುವ ಕೆಲಸಗಾರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಅದರಲ್ಲೂ ಚಾಲಕರೇ ಉಗ್ರರ ಮೇನ್ ಟಾರ್ಗೆಟ್ ಆಗಿದ್ದಾರೆ.