ಲೂಧಿಯಾನ(ಪಂಜಾಬ್): ಹೊಸದಾಗಿ ಮದುವೆಯಾಗಿದ್ದ ಯುವತಿ ಮೇಲೆ ಐವರು ಕಾಮುಕರು ಅತ್ಯಾಚಾರ ಮಾಡಿ ಮಾಲ್ ಮುಂದೆ ಎಸೆದು ಹೋಗಿರುವ ಘಟನೆ ಲೂಧಿಯಾನ ನಗರ ಸಮೀಪದ ಹಳ್ಳಿಯೊಂದರಲ್ಲಿ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ, ಯುವತಿ ಮದುವೆ ಕಾರ್ಯಕ್ರಮವೊಂದರಲ್ಲಿ ಮೆಹಂದಿ ಹಚ್ಚಲು ಹೋಗಿದ್ದಾಗ ದುರ್ಘಟನೆ ನಡೆದಿದೆ. ಎಂಬಿಡಿ ಮಾಲ್‌ನಲ್ಲಿ ಹಮ್ಮಿಕೊಂಡಿದ್ದ ಮದುವೆ ಕಾರ್ಯಕ್ರಮದಲ್ಲಿ ಮೆಹಂದಿ ಹಚ್ಚಲು ಯುವತಿಯನ್ನು ಆಹ್ವಾನಿಸಿದ್ದಾರೆ. ಮಾಲ್‌ಗೆ ಬರುತ್ತಿದ್ದಂತೆ ಈಕೆಯನ್ನು ಮಂಡಿಯಾನಿ ಎಂಬ ಹಳ್ಳಿಗೆ ಕರೆದುಕೊಂಡು ಹೋಗಿದ್ದಾರೆ. ದುರುಳರ ಯೋಜನೆ ಬಗ್ಗೆ ಏನೂ ಅರಿಯದ ಈಕೆ ಅವರೊಂದಿಗೆ ತೆರಳಿದ್ದಾಳೆ. ಬಳಿಕ ಬೆದರಿಕೆಯೊಡ್ಡಿ ಮಂಡಿಯಾನಿ ಎಂಬ ಹಳ್ಳಿಯಲ್ಲಿ ಐವರು ಕಾಮುಕರು ಸಾಮೂಹಿಕ ಅತ್ಯಾಚಾರ ವೆಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.