ನವದೆಹಲಿ: ದೆಹಲಿಯ ದ್ವಾರಕಾ ಸೆಕ್ಟರ್ - 4 ಪ್ರದೇಶದಲ್ಲಿ ಒಂದೇ ಕುಟುಂಬದ ಐವರಿಗೆ ಕೊರೊನಾ ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿದೆ. ಇದರೊಂದಿಗೆ ರಾಜಧಾನಿಯ ನೈರುತ್ಯ ಭಾಗದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 58ಕ್ಕೇರಿದೆ.
ಒಂದೇ ಕುಟುಂಬದ ಐವರಿಗೆ ಕೊರೊನಾ ಪಾಸಿಟಿವ್: ಅಪಾರ್ಟ್ಮೆಂಟ್ ಸೀಲ್ಡೌನ್
ದೆಹಲಿಯ ಅಪಾರ್ಟಮೆಂಟ್ ಒಂದರಲ್ಲಿ ವಾಸಿಸುತ್ತಿದ್ದ ಒಂದೇ ಕುಟುಂಬದ ಐವರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ.
5 members of a family test COVID
ಸೋಂಕು ತಗುಲಿರುವ ಎಲ್ಲ ಐದು ಜನರನ್ನು ಕೊರೊನಾ ಚಿಕಿತ್ಸೆ ಮೀಸಲು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೆಯೇ ಈ ಕುಟುಂಬ ವಾಸಿಸುತ್ತಿದ್ದ ಸಂಪೂರ್ಣ ಅಪಾರ್ಟ್ಮೆಂಟ್ ಸೀಲ್ಡೌನ್ ಮಾಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಪ್ರಸ್ತುತ ಅಪಾರ್ಟ್ಮೆಂಟ್ ಪ್ರವೇಶದ್ವಾರದಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.