ಪಾಟ್ನಾ: ಬಿಹಾರದಲ್ಲಿ 166 ಗ್ರೂಪ್-ಡಿ ಹುದ್ದೆಗಳಿಗೆ 5 ಲಕ್ಷ ಅರ್ಜಿಗಳು ಬಂದಿರುವ ವಿಚಾರ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದ್ದು, ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಹಾರ ಸಚಿವ ಶ್ರವಣ್ ಕುಮಾರ್, ಇಷ್ಟೊಂದು ಜನರು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದರೆ ಸರ್ಕಾರ ಏನು ಮಾಡೋಕಾಗುತ್ತೆ? ಎಂದು ಹೇಳಿಕೆ ನೀಡಿದ್ದಾರೆ.
166 ಗ್ರೂಪ್-ಡಿ ಖಾಲಿ ಹುದ್ದೆಗಳಿಗೆ ಪದವೀಧರರು, ಸ್ನಾತಕೋತ್ತರ ಪದವೀಧರರು, ಎಂಬಿಎ ಮತ್ತು ಎಂಸಿಎ ಪದವಿ ಪಡೆದವರನ್ನು ಒಳಗೊಂಡಂತೆ ಸುಮಾರು ಐದು ಲಕ್ಷ ಅರ್ಜಿದಾರರು ಅರ್ಜಿ ಸಲ್ಲಿಸಿದ್ದು, ಬಿಹಾರ ಸರ್ಕಾರಕ್ಕೆ ಈಗ ತಲೆಬಿಸಿಯಾಗಿದೆ. ಹೀಗೆ ಸರ್ಕಾರಿ ನೌಕರಿಗೆ ಬೇಡಿಕೆ ಹೆಚ್ಚುತ್ತಿರುವುದು ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಸಿಗದೆ ನಿರುದ್ಯೋಗ ಸಮಸ್ಯೆಗೆ ಎತ್ತಿ ಹಿಡಿದ ಕನ್ನಡಿಯಾಗಿದೆ.