ಕರ್ನಾಟಕ

karnataka

ETV Bharat / bharat

ಭೀಕರ ರಸ್ತೆ ಅಪಘಾತ: ನಡೆದು ಸಾಗುತ್ತಿದ್ದ ಐವರು ಕಾರ್ಮಿಕರ ದುರ್ಮರಣ - ಹರಿಯಾಣದಲ್ಲಿ ಭೀಕರ ರಸ್ತೆ ಅಪಘಾತ

ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕರಿಗೆ ಟ್ರಕ್​ ಗುದ್ದಿದ ಪರಿಣಾಮ ಓರ್ವ ಮಹಿಳೆ, ಒಂದು ಮಗು ಸೇರಿ ಐವರು ಮೃತಪಟ್ಟಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

accident in Hariyana
ಐವರು ಕಾರ್ಮಿಕರ ದುರ್ಮರಣ

By

Published : Mar 29, 2020, 4:34 PM IST

ಹರಿಯಾಣ: ವೇಗವಾಗಿ ಬಂದ ಟ್ರಕ್​ ಗುದ್ದಿದ ಪರಿಣಾಮ ಐವರು ಕಾರ್ಮಿಕರು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದ ಗುರುಗ್ರಾಮದ ಬಳಿ ನಡೆದಿದೆ.

ಕುಂಡ್ಲಿ-ಮಾನೇಸರ್-ಪಾಲ್ವಾಲ್ ಎಕ್ಸ್‌ಪ್ರೆಸ್ ವೇ ಬಳಿ ಶನಿವಾರ ರಾತ್ರಿ ಕಾರ್ಮಿಕರು ರಸ್ತೆ ಮೇಲೆ ನಡೆದುಕೊಂಡು ಹೋಗುವಾಗ ತರಕಾರಿ ತುಂಬಿದ್ದ ಟ್ರಕ್ ವೇಗವಾಗಿ ಬಂದಿದ್ದು, ನಿಯಂತ್ರಣ ಕಳೆದುಕೊಂಡ ಚಾಲಕ ಅವರಿಗೆ ಗುದ್ದಿದ್ದಾನೆ ಎಂದು ಮಾನೇಸರ್ ಡಿಸಿಪಿ ದೀಪಕ್ ಶಹ್ರಾನ್ ತಿಳಿಸಿದ್ದಾರೆ.

ಘಟನೆಯಲ್ಲಿ ಓರ್ವ ಮಹಿಳೆ, ಒಂದು ಮಗು ಸೇರಿ ಐವರು ಸಾವನ್ನಪ್ಪಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ABOUT THE AUTHOR

...view details