ಹೈದರಾಬಾದ್:ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಹೈದರಾಬಾದ್‌ನ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್ಐ)ದ ಅಧಿಕಾರಿಗಳು ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 5 ಕೆಜಿ ಚಿನ್ನದ ಬಿಸ್ಕೆಟ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಹೈದರಾಬಾದ್ ಏರ್ಪೋರ್ಟ್‌ನಲ್ಲಿ 5 ಕೆಜಿ ಚಿನ್ನ ವಶ! ಕಳ್ಳರ ಕೈಚಳಕ ನೀವು ನೋಡಲೇ ಬೇಕು! - ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಯಾವುದೇ ದಾಖಲೆಗಳಿಲ್ಲದೆ ವಿದೇಶದಿಂದ ಭಾರತಕ್ಕೆ ತರಲಾಗುತ್ತಿದ್ದ ಸುಮಾರು 5 ಕೆಜಿ ಚಿನ್ನದ ಬಿಸ್ಕೆಟ್ಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್ಐ)ದ ಅಧಿಕಾರಿಗಳು ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ನಿರ್ಗಮನ ದ್ವಾರದ ಬಳಿ, ಇಂಡಿಗೊ ಏರ್‌ಲೈನ್ಸ್‌ನ ಒಬ್ಬ ಗ್ರಾಹಕ ಸೇವಾ ಅಧಿಕಾರಿಯನ್ನು ತಡೆದ ಅಧಿಕಾರಿಗಳು, ವಿದೇಶದಿಂದ ಪ್ಯಾಕೆಟ್‌ಗಳಲ್ಲಿ ಸುತ್ತಿ ತರಲಾಗುತ್ತಿದ್ದ 42 ತುಂಡು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಬಿಸ್ಕೆಟ್ ರೂಪದಲ್ಲಿದ್ದ ಈ ಚಿನ್ನವನ್ನು, ಪೊಲೀಸರಿಗೆ ಅನುಮಾನ ಬಾರದಂತೆ ಪ್ರತಿಯೊಂದು ಬಿಲ್ಲೆಗಳನ್ನೂ ಪ್ಯಾಕ್ ಮಾಡಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಅಧಿಕಾರಿಗಳು ಚಿನ್ನಕ್ಕೆ ಯಾವುದೇ ದಾಖಲೆಗಳಿಲ್ಲದ ಕಾರಣದಿಂದಾಗಿ ಚಿನ್ನವನ್ನು ವಶಪಡಿಸಲಾಗಿದೆ.
ಒಟ್ಟು 4891.200 ಗ್ರಾಂ ತೂಕದ ಶುದ್ಧ ಚಿನ್ನದ ಮೌಲ್ಯ 1,84,88,736/- ರೂ. ಯಾವುದೇ ದಾಖಲೆಗಳಿಲ್ಲದ ಕಾರಣ, ಗ್ರಾಹಕ ಕಾಯ್ದೆ 1962ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಯುತ್ತಿದೆ.