ಶ್ರೀನಗರ: ಸುಸಜ್ಜಿತವಾಗಿ ತರಬೇತಿಗೊಂಡಿರುವ ಐವರು ಜೆಇಎಂ ಉಗ್ರರು ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಗಡಿ ನಿಯಂತ್ರಣ ರೇಖೆ ದಾಟಿದ್ದಾರೆ ಎನ್ನಲಾಗಿರುವ ಉಗ್ರರು ಭಾರತೀಯ ಸೇನೆ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಕಣಿವೆ ರಾಜ್ಯಕ್ಕೆ ಮತ್ತೆ 25 ಸಾವಿರ ಸೈನಿಕರ ನಿಯೋಜನೆ...!
ಮಾಹಿತಿ ತಿಳಿಯುತ್ತಿದ್ದಂತೆ ಭಾರತೀಯ ವಾಯುಸೇನೆ ಹಾಗೂ ಭೂಸೇನೆ ಹೈ ಅಲರ್ಟ್ನಲ್ಲಿದೆ. ಮಾಹಿತಿ ಬಳಿಕ ಕಾರ್ಯಗತವಾಗಿರುವ ಕೇಂದ್ರ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಸಿ-17 ಯುದ್ಧ ವಿಮಾನಗಳನ್ನು ಕಾಶ್ಮೀರಕ್ಕೆ ಕಳುಹಿಸಿದೆ.
ಈ ಬೆಳವಣಿಗೆಗೂ ಮುನ್ನ ಕೇಂದ್ರ ಮಂಗಳವಾರ ಸುಮಾರು 25 ಸಾವಿರ ಸೈನಿಕರನ್ನು ಕಾಶ್ಮೀರಕ್ಕೆ ಕಳುಹಿಸಿತ್ತು. ಸದ್ಯ ಉಗ್ರರ ನುಸುಳುವಿಕೆ ವಿಚಾರದ ಬಳಿಕ ಸೇನೆ ಮತ್ತಷ್ಟು ಅಲರ್ಟ್ ಆಗಿದೆ.