ಕರ್ನಾಟಕ

karnataka

ETV Bharat / bharat

ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಐವರು ವಿದೇಶಿಗರಿಗೆ ಭಾರತ ತೊರೆಯಲು ಸೂಚನೆ - ವೀಸಾ ನೀತಿ ಉಲ್ಲಂಘನೆ

ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿ ವೀಸಾ ನೀತಿಯನ್ನ ಉಲ್ಲಂಘಿಸಿದ ಐವರು ವಿದೇಶಿಗರಿಗೆ ಭಾರತ ತೊರೆಯಲು ಸೂಚಿಸಲಾಗಿದೆ ಎಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರೈ ತಿಳಿಸಿದ್ದಾರೆ.

Ministry of home affairs
ಭಾರತ ಗೃಹ ಸಚಿವಾಲಯ

By

Published : Mar 3, 2020, 4:30 PM IST

ನವದೆಹಲಿ: ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿ ವೀಸಾ ನೀತಿಯನ್ನ ಉಲ್ಲಂಘಿಸಿದ ಐವರು ವಿದೇಶಿಗರಿಗೆ ಭಾರತ ತೊರೆಯಲು ಸೂಚಿಸಲಾಗಿದೆ ಎಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರೈ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ರೈ, ಐವರು ವಿದೇಶಿಗರು ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ವೀಸಾ ನೀತಿಯನ್ನ ಉಲ್ಲಂಘಿಸಿದ್ದು, ಅವರಿಗೆ ಭಾರತವನ್ನು ತೊರೆಯಲು ಸೂಚಿಸಲಾಗಿದೆ ಎಂದು ವಲಸೆ ಮಂಡಳಿ (ಬ್ಯೂರೋ ಆಫ್ ಇಮಿಗ್ರೇಷನ್) ವರದಿ ಮಾಡಿದೆ ಎಂದು ಮಾಹಿತಿ ನೀಡಿದರು.

ಪೌರತ್ವ ತಿದ್ದುಪಡಿ ಕಾಯ್ದೆಯು 2014ರ ಡಿ.31ರೊಳಗೆ ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಅಲ್ಲಿನ ಧಾರ್ಮಿಕ ಕಿರುಕುಳಕ್ಕೆ ಬೇಸತ್ತು ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರರಿಗೆ (ಹಿಂದೂ, ಕ್ರೈಸ್ತ, ಬೌದ್ಧ ಹಾಗೂ ಪಾರ್ಸಿ) ಭಾರತದ ಪೌರತ್ವ ನೀಡುವ ಕಾಯ್ದೆಯಾಗಿದೆ. ಇದರ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆದಿದ್ದು, ಇನ್ನೂ ಕೂಡ ಕೆಲ ಭಾಗಗಳಲ್ಲಿ ಪ್ರತಿಭಟನೆಗಳು ಮುಂದುವರೆದಿವೆ.

ABOUT THE AUTHOR

...view details