ಕರ್ನಾಟಕ

karnataka

ETV Bharat / bharat

'ಭಾರತದ ಆರ್ಥಿಕತೆ $ 5 ಟ್ರಿಲಿಯನ್​​​ಗೆ ತಲುಪಲಿದೆ.... ಹಿಂದಿನ ಸರ್ಕಾರಗಳೂ ಪಾಲೂ ಇದೆ! - undefined

ಹಿಂದಿನ ಸರ್ಕಾರಗಳು ಹಾಕಿಕೊಟ್ಟಂತಹ ಗಟ್ಟಿಯಾದ ತಳಪಾಯದಿಂದಾಗಿ 2024ರ ವೇಳೆಗೆ ಭಾರತದ ಆರ್ಥಿಕತೆ $ 5 ಟ್ರಿಲಿಯನ್​​ ತಲುಪಲಿದೆ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಹೇಳಿದ್ದಾರೆ

ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ

By

Published : Jul 19, 2019, 5:51 PM IST

ನವದೆಹಲಿ: ಹಿಂದಿನ ಸರ್ಕಾರಗಳು ಹಾಕಿಕೊಟ್ಟಂತಹ ಗಟ್ಟಿಯಾದ ತಳಪಾಯದಿಂದಾಗಿ 2024ರ ವೇಳೆಗೆ ಭಾರತದ ಆರ್ಥಿಕತೆ $ 5 ಟ್ರಿಲಿಯನ್​​ ತಲುಪಲಿದೆ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಹೇಳಿದ್ದಾರೆ.

ಸಮೃದ್ಧ ಭಾರತ ಫೌಂಡೇಷನ್ ಆಯೋಜಿಸಿದ್ದ 'ಭಾರತಕ್ಕೆ ಮತ್ತಷ್ಟು ಭರವಸೆ' ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ನಂತರ ಭಾರತೀಯರು ಸತತ ಪರಿಶ್ರಮದಿಂದ ವಿವಿಧ ಆರ್ಥಿಕ ಮತ್ತು ಸಾಮಾಜಿಕ ವಲಯಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ, ತಮ್ಮದೇ ಆದ ಕೊಡುಗೆ ನೀಡುತ್ತಿವೆ ಎಂದು ತಿಳಿಸಿದ್ದಾರೆ.

2024ರ ವೇಳೆಗೆ ಭಾರತದ ಆರ್ಥಕತೆ $ 5 ಟ್ರಿಲಿಯನ್ ಆಗಲಿದೆ. ಹಿಂದಿನ ಸರ್ಕಾರಗಳ ಭದ್ರವಾದ ಅಡಿಪಾಯವೇ ಇದಕ್ಕೆ ಕಾರಣ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಈ ಸಾಧನೆಯ ಮಟ್ಟಕ್ಕೆ ಬೆಳೆಯಲು ಬ್ರಿಟಿಷರ ಪರಿಶ್ರಮವಿಲ್ಲ. ಇದೆಲ್ಲ ಸ್ವಾತಂತ್ರ್ಯ ಭಾರತೀಯರ ಪರಿಶ್ರಮ ಎಂದು ಅಭಿಪ್ರಾಯಪಟ್ಟರು.

ಈ ಐದು ವರ್ಷಗಳಲ್ಲಿ ಆರ್ಥಿಕತೆ, ಆರೋಗ್ಯ, ಶಿಕ್ಷಣ ಸೇರಿದಂತೆ ಹಲವು ಯೋಜನೆಗಳಿಗೆ ಒತ್ತು ನೀಡಲಾಗಿದೆ. ಈ ಯೋಜನೆಗಳ ಆಧಾರದ ಮೇಲೆ ಹೂಡಿಕೆ ಮಾಡಲಾಗುವುದು. ದೇಶದ ಅಭಿವೃದ್ಧಿಗೆ ಕಾಂಗ್ರೆಸ್ಸೇತರ ಸರ್ಕಾರಗಳ ಕೊಡುಗೆಯೂ ಅಪಾರ. ಆದರೆ, ಅವುಗಳನ್ನು ಹೊರಗಿಡುವುದು ಅಸಂಬದ್ಧ ಎಂದರು.

For All Latest Updates

TAGGED:

ABOUT THE AUTHOR

...view details