ಕಟಕ್ (ಒಡಿಶಾ):ಅಂಫಾನ್ ಚಂಡಮಾರುತದ ನಂತರ ಪರಿಹಾರ ಕಾರ್ಯದಲ್ಲಿ ತೊಡಗಿದ್ದ 49 ಎನ್ಡಿಆರ್ಎಫ್ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ.
49 ಎನ್ಡಿಆರ್ಎಫ್ ಸಿಬ್ಬಂದಿಗೆ ಸೋಂಕು: ಅಂಫಾನ್ ಪರಿಹಾರ ಕಾರ್ಯವೇ ಮುಳುವಾಯ್ತಾ..? - ಕೊರೊನಾ ಟೆಸ್ಟ್
ಪಶ್ಚಿಮ ಬಂಗಾಳದಲ್ಲಿ ಅಂಫಾನ್ ನಂತರದ ಕಾರ್ಯದಲ್ಲಿ ತೊಡಗಿದ್ದ ಎನ್ಡಿಆರ್ಎಫ್ನ 49 ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಕಟಕ್ನ ಮುಂಡಾಲಿಯದ 3ನೇ ಬೆಟಾಲಿಯನ್ನ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತದ ಪರಿಹಾರ ಕಾರ್ಯಗಳನ್ನು ಕೈಗೊಂಡು, ಒಟ್ಟು 173 ಮಂದಿ ಜೂನ್ 3ರಂದು ಕಟಕ್ಗೆ ವಾಪಸ್ ಆಗಿದ್ದರು. ಇವರನ್ನು ಸೋಂಕು ಪರೀಕ್ಷೆಗೆ ಒಳಪಡಿಸಿದಾಗ 49 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸದ್ಯಕ್ಕೆ ಉಳಿದ ಸಿಬ್ಬಂದಿಯನ್ನು ಕ್ವಾರಂಟೈನ್ಗೆ ಕಳುಹಿಸಲಾಗಿದೆ.
ಶನಿವಾರಷ್ಟೇ ಒಬ್ಬ ಸಿಬ್ಬಂದಿಗೆ ಲಕ್ಷಣರಹಿತ ಸೋಂಕು ದೃಢಪಟ್ಟಿತ್ತು. ಈಗ 49 ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಆರೋಗ್ಯವಾಗಿದ್ದು, ಶೀಘ್ರದಲ್ಲೇ ಸೋಂಕಿನಿಂದ ಗುಣಮುಖರಾಗುವ ಭರವಸೆಯನ್ನು ಎನ್ಡಿಆರ್ಎಫ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.