ನವದೆಹಲಿ:ಕಳೆದ 24 ಗಂಟೆಗಳಲ್ಲಿ 45,209 ಕೊರೊನಾ ಸೋಂಕಿತರು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 90,95,807ಕ್ಕೆ ಏರಿಕೆಯಾಗಿದೆ.
501 ಮಂದಿ ಕೊರೊನಾದಿಂದ ಕೊನೆಯುಸಿರೆಳೆದಿದ್ದು, ಈವರೆಗೆ ಒಟ್ಟು 1,33,227 ಮಂದಿ ಮೃತಪಟ್ಟಿದ್ದಾರೆ. ನಿನ್ನೆ 43,493 ಮಂದಿ ಸಂಪೂರ್ಣ ಗುಣಮುಖರಾಗಿದ್ದು, ಈವರೆಗೆ ಒಟ್ಟು 85,21,617 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ 4,40,962 ಸಕ್ರಿಯ ಮಂದಿ ಚಿಕಿತ್ಸೆ ಮಂದುವರೆದಿದೆ.
ನಿನ್ನೆ 10,75,326 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ನವೆಂಬರ್ 21 ರವರೆಗೆ 13,17,33,134 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ ಒಟ್ಟು 90,95,807 ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಮತ್ತು ಸಂಶೋಧನಾ ಮಂಡಳಿ ಮಾಹಿತಿ ನೀಡಿದೆ.
ರಾಜ್ಯವಾರು ಕೊರೊನಾ ಪ್ರಕರಣಗಳು
ಸಕ್ರಿಯ ಪ್ರಕರಣಗಳ ಸಂಖ್ಯೆ ಸತತ 12 ನೇ ದಿನವೂ ಐದು ಲಕ್ಷಕ್ಕಿಂತ ಕಡಿಮೆಯಾಗಿದೆ. ರಾಷ್ಟ್ರೀಯ ಚೇತರಿಕೆ ದರ ಶೇಕಡಾ 93.69 ಕ್ಕೆ ತಲುಪಿದ್ದು, ಸಾವಿನ ಪ್ರಮಾಣವು ಶೇಕಡಾ 1.46 ಕ್ಕೆ ಇಳಿದಿದೆ. ಇದುವರೆಗೆ ಒಟ್ಟು 17,74,455 ಕೊರೊನಾ ಪ್ರಕರಣಗಳನ್ನು ವರದಿ ಮಾಡಿರುವ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಸದ್ಯ80,878ಸಕ್ರಿಯ ಪ್ರಕರಣಗಳನ್ನು ಹೊಂದಿದೆ.