ಕರ್ನಾಟಕ

karnataka

ETV Bharat / bharat

ಕೊರೊನಾ ಭೀತಿ: ಟೆಕ್ಕಿಯ ಸಂಪರ್ಕಕ್ಕೆ ಬಂದ 45 ಜನರ ಮೇಲೆ ಆಸ್ಪತ್ರೆಯಲ್ಲಿ ನಿಗಾ - ಹೈದರಾಬಾದ್​ನಲ್ಲಿ ಕೊರೊನಾ

ಟೆಕ್ಕಿ ಜೊತೆ ಸಂಪರ್ಕದಲ್ಲಿದ್ದ 45 ಜನರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ತಪಾಸಣೆ ನಡೆಸಿದ್ದಾಗಿ ತೆಲಂಗಾಣ ಆರೋಗ್ಯ ಸಚಿವ ರಾಜೇಂದರ್ ಅವರು ಮಾಹಿತಿ ನೀಡಿದ್ದಾರೆ.

coronavirus
ಕೊರೊನಾ ಭೀತಿ

By

Published : Mar 4, 2020, 7:07 AM IST

ಹೈದರಾಬಾದ್: ಕೊರೊನಾ ಸೋಂಕು ಪೀಡಿತ ಟೆಕ್ಕಿಯ ಜೊತೆ ಸಂಪರ್ಕದಲ್ಲಿದ್ದ 88ರಲ್ಲಿ 45 ಜನರನ್ನು ಇಲ್ಲಿನ ಗಾಂಧಿ ಆಸ್ಪತ್ರೆಗೆ ದಾಖಲಿಸಿ, ನಿಗಾ ವಹಿಸಲಾಗಿದೆ.

ಟೆಕ್ಕಿ ಜೊತೆ ಸಂಪರ್ಕದಲ್ಲಿದ್ದ 45 ಜನರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ತಪಾಸಣೆ ನಡೆಸಿದ್ದಾಗಿ ತೆಲಂಗಾಣ ಆರೋಗ್ಯ ಸಚಿವ ರಾಜೇಂದರ್ ಅವರು ಮಾಹಿತಿ ನೀಡಿದ್ದಾರೆ.

45 ಜನರನ್ನು 14 ದಿನಗಳ ಕಾಲ ಪ್ರತ್ಯೇಕವಾಗಿರಿಸಲಾಗುವುದು. ಅವರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ. 45 ಜನರನ್ನು ಹೊರತುಪಡಿಸಿ ಉಳಿದವರನ್ನು ಕೂಡ ಆಸ್ಪತ್ರೆಗೆ ಕರೆತಂದು ಕೊರೊನಾ ಟೆಸ್ಟ್ ಮಾಡಿಸುತ್ತೇವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಟೆಕ್ಕಿಯ ಕುಟುಂಬಸ್ಥರು ಹಾಗೂ ಬೆಂಗಳೂರಿನಿಂದ ಹೈದರಾಬಾದ್​ಗೆ ಟೆಕ್ಕಿ ಜೊತೆ ಬಸ್​ನಲ್ಲಿ ಬಂದವರ ಮೇಲೆ ಕೂಡ ನಿಗಾ ಇರಿಸಲಾಗಿದೆ.

ABOUT THE AUTHOR

...view details