ನವದೆಹಲಿ: 2021-22ರ ಕೇಂದ್ರ ಬಜೆಟ್ ಘೋಷಣೆಯಾದ ಮಾಧ್ಯಮ ಸಂಸ್ಥೆಯೊಂದು ನಡೆಸಿದ ಸಮೀಕ್ಷೆ ನಡೆಸಿದ್ದು, ತಾನು ಸಮೀಕ್ಷೆ ನಡೆಸಿದ ಒಟ್ಟು ಜನರಲ್ಲಿ ಶೇ 45ರಷ್ಟು ಮಂದಿ ಬಜೆಟ್ ಬಗ್ಗೆ ತೃಪ್ತಿ ಹೊಂದಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶದ ವಿವಿಧ ಭಾಗಗಳಿಂದ ಸುಮಾರು 1200 ಮಂದಿಯನ್ನು ಸಮೀಕ್ಷೆಗೆ ಆಯ್ಕೆ ಮಾಡಿಕೊಂಡಿದ್ದು, ಬಜೆಟ್ ನಂತರ ಕೆಲವು ಉತ್ಪನ್ನಗಳ ಬೆಲೆ ಏರಿಕೆಯಾಗುತ್ತದೆ ಎಂದು ಜನರು ಭಾವಿಸಿದ್ದರಿಂದ ಬಜೆಟ್ ಜನರನ್ನು ಅಷ್ಟಾಗಿ ಪ್ರಚೋದಿಸಿಲ್ಲ ಎಂದು ಸಮೀಕ್ಷೆ ಮಾಹಿತಿ ಬಹಿರಂಗಪಡಿಸಿದೆ.
ಶೇಕಡಾ 35.8ರಷ್ಟು ಮಂದಿ ಬಜೆಟ್ ತೃಪ್ತಿ ತಂದಿಲ್ಲ ಎಂದು ಮಾಹಿತಿ ನೀಡಿದ್ದು, ಬಜೆಟ್ ನಂತರ ಬೆಲೆಗಳು ಇಳಿಯುವುದಿಲ್ಲ ಎಂದು ಶೇಕಡಾ 46.1ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಶೇಕಡಾ 18.1ರಷ್ಟು ಮಂದಿ ಬೆಲೆಗಳು ಇಳಿಯುತ್ತವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸಿಸಿಬಿ ವಶದಲ್ಲಿದ್ದ ಐಷಾರಾಮಿ ಕಾರು ನಾಪತ್ತೆ: ಅಧಿಕಾರಿಯೇ ಮಾರಾಟ ಮಾಡಿರುವ ಶಂಕೆ!
ಪ್ರತೀ ವರ್ಷ ಈ ಸಮೀಕ್ಷೆ ನಡೆಯುತ್ತಿದ್ದು, 2015ರಿಂದ ಇತ್ತೀಚೆಗೆ ಇದೇ ಮೊದಲ ಬಾರಿಗೆ ಬಜೆಟ್ಗೆ ಅತ್ಯಂತ ಕೆಟ್ಟ ಸ್ಕೋರ್ ಸಿಕ್ಕಿದೆ. ಆದರೆ ಮುಂಬರುವ ವರ್ಷಗಳಲ್ಲಿ ಕೆಲವರು ಆಶಾವಾದ ಇಟ್ಟುಕೊಂಡಿದ್ದಾರೆ. ಮುಂದಿನ ಒಂದು ವರ್ಷದಲ್ಲಿ ನಮ್ಮ ಜೀವನ ಮಟ್ಟ ಸುಧಾರಿಸುತ್ತದೆ ಎಂದು ಶೇಕಡಾ 27.6ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಆದರೆ ಶೇಕಡಾ 29ರಷ್ಟು ಮಂದಿ ಜೀವನ ಸುಧಾರಿಸುವುದಿಲ್ಲ ಎಂದು ಸಮೀಕ್ಷೆಯಲ್ಲಿ ಭವಿಷ್ಯ ನುಡಿದಿದ್ದಾರೆ.
ಶೇಕಡಾ 56.4ರಷ್ಟು ಮಂದಿ ಮಾಸಿಕ ಖರ್ಚುಗಳು ಹೆಚ್ಚಿಸಬಹುದೆಂದು ನಿರೀಕ್ಷಿಸಿದ್ದು, ಶೇಕಡಾ 16.1ರಷ್ಟು ಮಂದಿ ಈನ ಬಾರಿಯ ಬಜೆಟ್ನಿಂದ ಹೆಚ್ಚು ಉಳಿತಾಯವಾಗಲಿದೆ ಎಂದಿದ್ದಾರೆ. ಮುಂದಿನ ವರ್ಷದಲ್ಲಿ ದಿನನಿತ್ಯದ ಖರ್ಚಿಗೂ ಕಷ್ಟಕರವಾಗಲಿದೆ ಎಂದು 49.7ರಷ್ಟು ಮಂದಿ ಭಾವಿಸಿದ್ದಾರೆ. ಶೇಕಡಾ 34ರಷ್ಟು ಮಂದಿ ಖರ್ಚುಗಳು ಹೆಚ್ಚಾದರೂ ಅವುಗಳನ್ನು ಸರಿದೂಗಿಸಬಹುದು ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ತಂಡದ ಸಾಧನೆ ಬಗ್ಗೆಯೂ ಸಮೀಕ್ಷೆಯಲ್ಲಿ ಪ್ರಶ್ನೆ ಕೇಳಿದ್ದು, ಸಾಕಷ್ಟು ಮಂದಿ ನಕಾರಾತ್ಮಕ ಉತ್ತರ ನೀಡಿದ್ದಾರೆ.