ಕರ್ನಾಟಕ

karnataka

By

Published : Oct 1, 2020, 7:50 PM IST

Updated : Oct 1, 2020, 8:30 PM IST

ETV Bharat / bharat

ದೇಶದ 4,327 ಸ್ಥಳೀಯ ನಗರಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಿದ ಕೇಂದ್ರ

2014ರಲ್ಲಿ ಪ್ರಾರಂಭವಾದಾಗಿನಿಂದ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯು ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆಯ ಎರಡರಲ್ಲೂ ಗಮನಾರ್ಹ ಪ್ರಗತಿ ಸಾಧಿಸಿದೆ. ಒಟ್ಟು 4,327 ನಗರ ಸ್ಥಳೀಯ ಸಂಸ್ಥೆಗಳನ್ನು ಬಯಲು ಮುಕ್ತ ಶೌಚಾಲಯ ಎಂದು ಘೋಷಿಸಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Swachh Bharat
ಸ್ವಚ್ಛ ಭಾರತ ಮಿಷನ್

ನವದೆಹಲಿ: ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ದೇಶದಲ್ಲಿ ಈವರೆಗೆ 4,300ಕ್ಕೂ ಅಧಿಕ ಸ್ಥಳೀಯ ನಗರಗಳನ್ನು ಬಯಲು ಮುಕ್ತ ಶೌಚಾಲಯ ಎಂದು ಘೋಷಿಸಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಉದ್ದೇಶಿತ ಮಿಷನ್‌ನ ಗುರಿ ಮೀರಿ 66 ಲಕ್ಷಕ್ಕೂ ಅಧಿಕ ವೈಯಕ್ತಿಕ ಮನೆ ಶೌಚಾಲಯ ಮತ್ತು 6 ಲಕ್ಷಕ್ಕೂ ಹೆಚ್ಚು ಸಮುದಾಯ ಮತ್ತು ಸಾರ್ವಜನಿಕ ಶೌಚಾಲಗಳ ನಿರ್ಮಾಣ ಮಾಡಲಾಗಿದೆ ಎಂದು ಸಚಿವಾಲಯ ಹೇಳಿದೆ.

2014ರಲ್ಲಿ ಪ್ರಾರಂಭವಾದಾಗಿನಿಂದ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯು ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆಯ ಎರಡರಲ್ಲೂ ಗಮನಾರ್ಹ ಪ್ರಗತಿ ಸಾಧಿಸಿದೆ. ಒಟ್ಟು 4,327 ನಗರ ಸ್ಥಳೀಯ ಸಂಸ್ಥೆಗಳನ್ನು ಬಯಲು ಮುಕ್ತ ಶೌಚಾಲಯ ಎಂದು ಘೋಷಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಎಸ್‌ಬಿಎಂ-ಯು ಆರನೇ ವಾರ್ಷಿಕೋತ್ಸವವನ್ನು ಶುಕ್ರವಾರ 'ಸ್ವಚ್ಛತಾ ಕೆ 6 ಸಾಲ್, ಬೆಮಿಸಾಲ್' ಎಂಬ ವೆಬ್‌ನಾರ್ ಮೂಲಕ ಆಚರಿಸಲಾಗುತ್ತಿದೆ.

ಮಹಾತ್ಮ ಗಾಂಧಿ ಅವರ 151ನೇ ಜನ್ಮ ದಿನಾಚರಣೆಯಂದು ಸ್ವಚ್ಛ ಭಾರತ ಮಿಷನ್ ಅಡಿ ಕಳೆದ ಆರು ವರ್ಷಗಳಿಂದ ರಾಜ್ಯಗಳು, ನಗರಗಳು ಮತ್ತು ಪಾಲುದಾರ ಸಂಸ್ಥೆಗಳ ಆಚರಿಸಿಕೊಂಡು ಬರುತ್ತಿವೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಭಾರತದಾದ್ಯಂತ ಪರಿಣಾಮಕಾರಿ ಘನತ್ಯಾಜ್ಯ ನಿರ್ವಹಣೆಯ (ಎಸ್‌ಡಬ್ಲ್ಯುಎಂ) ನವೀನ ಅಭ್ಯಾಸಗಳನ್ನು ಪ್ರದರ್ಶಿಸುವ ಜಿಐಎಸ್ ಪೋರ್ಟಲ್ ಬಿಡುಗಡೆ ಮಾಡಲಿದ್ದಾರೆ.

ಘನತ್ಯಾಜ್ಯ ನಿರ್ವಹಣೆಯ ಕ್ಷೇತ್ರದಲ್ಲಿ ಶೇ 97ರಷ್ಟು ವಾರ್ಡ್‌ಗಳು ಮನೆ - ಮನೆಗೆ ತೆರಳಿ ತ್ಯಾಜ್ಯ ಸಂಗ್ರಹ ಮಾಡುತ್ತಿವೆ. 77 ಪ್ರತಿಶತ ವಾರ್ಡ್‌ಗಳು ಮೂಲದಲ್ಲೇ ತ್ಯಾಜ್ಯ ಬೇರ್ಪಡಿಸುತ್ತಿವೆ. ಆದರೆ, ಉತ್ಪತ್ತಿಯಾಗುವ ಒಟ್ಟು ತ್ಯಾಜ್ಯದ ಶೇ 67ರಷ್ಟು ಸಂಸ್ಕರಿಸಲಾಗುತ್ತಿದೆ. ಸಂಸ್ಕರಣೆಯು 2014ರ ಮಟ್ಟಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದಿದೆ.

Last Updated : Oct 1, 2020, 8:30 PM IST

ABOUT THE AUTHOR

...view details