ಅಹಮದಾಬಾದ್(ಗುಜರಾತ್):ವಿಶ್ವದ ಅತಿ ಎತ್ತರದ ದೇವಾಲಯ ನಿರ್ಮಾಣಕ್ಕೆ ನಾಳೆ ಶಂಕುಸ್ಥಾಪನೆ ನೆರವೇರಿಸಲು ಎಲ್ಲ ಸಿದ್ಧತೆಗಳು ನಡೆದಿವೆ.
ವಿಶ್ವದ ಅತಿ ಎತ್ತರದ ದೇವಾಲಯ ನಿರ್ಮಾಣಕ್ಕೆ ನಾಳೆ ಅಡಿಗಲ್ಲು ಸಮಾರಂಭ: 2 ಲಕ್ಷ ಭಕ್ತರ ಆಗಮನ ನಿರೀಕ್ಷೆ - 431 ಅಡಿ ಎತ್ತರದ ಜಗತ್ ಜನಾನಿ ಮಾ ಉಮಿಯಾ ಮಂದಿರ
ಅಹಮದಾಬಾದ್ನಲ್ಲಿ 431 ಅಡಿ ಎತ್ತರದ ಜಗತ್ ಜನನಿ ಮಾ ಉಮಿಯಾ ಮಂದಿರವನ್ನು ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ನಾಳೆ ಅಡಿಗಲ್ಲು ಸಮಾರಂಭ ಜರುಗಲಿದ್ದು, ಎರಡು ಲಕ್ಷ ಭಕ್ತರು ಸೇರುವ ನಿರೀಕ್ಷೆ ಇದೆ.
431 ಅಡಿ ಎತ್ತರದ ಜಗತ್ ಜನನಿ ಮಾ ಉಮಿಯಾ ಮಂದಿರವನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಜರ್ಮನ್ ವಾಸ್ತುಶಿಲ್ಪ ಕಂಪನಿಯೊಂದು ಭಾರತೀಯ ವಾಸ್ತುಶಿಲ್ಪದ ಸಹಯೋಗದೊಂದಿಗೆ ಹಿಂದೂ, ವೈದಿಕ ವಾಸ್ತುಗಳನ್ನು ಗಮನದಲ್ಲಿಟ್ಟುಕೊಂಡು 1.5 ಲಕ್ಷ ಚದರ್ ಗಜ ಪ್ರದೇಶದಲ್ಲಿ ಈ ದೇವಾಲಯ ನಿರ್ಮಾಣವಾಗಲಿದೆ. ಈ ದೇವಾಲಯ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ವಿಶ್ವ ಉಮಿಯಾ ಫೌಂಡೇಶನ್ ನೋಡಿಕೊಳ್ಳಲಿದೆ.
ದೇವಿಯ ವಿಗ್ರಹವನ್ನು 52 ಅಡಿ ಎತ್ತರದಲ್ಲಿ ಸ್ಥಾಪಿಸಲಾಗುವುದು. ಹಾಗೆಯೇ ಎಲ್ಲಾ ದೇವಾಲಯಗಳಂತೆ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗುವುದು.ನಾಳೆ ಶಂಕುಸ್ಥಾಪನೆ ನೆರವೇರಲಿದ್ದು, ಎರಡು ಲಕ್ಷ ಭಕ್ತರು ವಿಶ್ವದ ನಾನಾ ಕಡೆಗಳಿಂದ ಆಗಮಿಸುವ ನಿರೀಕ್ಷೆ ಇದೆ.