ನವದೆಹಲಿ:ದೇಶದ ವಿವಿಧ ಭಾಗಗಳಲ್ಲಿರುವ ವಲಸೆ ಕಾರ್ಮಿಕರನ್ನು ಹೊತ್ತು ಸಾಗುತ್ತಿರುವ ಶ್ರಮಿಕ್ ರೈಲುಗಳ ನಿಯಮಗಳನ್ನು ಪರಿಷ್ಕರಿಸಲಾಗಿದ್ದು, ಹೆಚ್ಚು ವಲಸೆ ಕಾರ್ಮಿಕರು ತೆರಳುವಂತೆ ಅವಕಾಶ ಕಲ್ಪಿಸಲಾಗಿದೆ.
ದೇಶದಲ್ಲಿ ಸಂಚರಿಸುತ್ತಿರುವ 400ಕ್ಕೂ ಹೆಚ್ಚು ಶ್ರಮಿಕ್ ರೈಲುಗಳಲ್ಲಿ ಇದೀಗ ತಲಾ 1,200 ವಲಸೆ ಕಾರ್ಮಿಕರು ಪ್ರಯಾಣ ಬೆಳೆಸಲು ಸಾಧ್ಯವಿದೆ.
ಸದ್ಯ ದೇಶದಲ್ಲಿ 428 ಶ್ರಮಿಕ್ ರೈಲುಗಳು ಓಡಾಡುತ್ತಿದ್ದು, 127 ರೈಲು ಉತ್ತರಪ್ರದೇಶ, 87 ಬಿಹಾರ, 24 ಮಧ್ಯಪ್ರದೇಶ, 20 ಒಡಿಶಾ, 16 ಜಾರ್ಖಂಡ್, 4 ರಾಜಸ್ಥಾನ, 3 ಮಹಾರಾಷ್ಟ್ರ, ತೆಲಂಗಾಣ ಹಾಗೂ ಪಶ್ಚಿಮ ಬಂಗಾಳದಲ್ಲಿ ತಲಾ 2 ಹಾಗೂ ಆಂಧ್ರಪ್ರದೇಶ ಹಾಗೂ ಹಿಮಾಚಲ ಪ್ರದೇಶದಲ್ಲಿ ಒಂದೊಂದು ರೈಲುಗಳು ಸಂಚರಿಸುತ್ತಿವೆ. ಶನಿವಾರ 80 ರೈಲು ಹಾಗೂ ಭಾನುವಾರ 64 ರೈಲುಗಳು ಸಂಚಾರ ನಡೆಸುತ್ತಿವೆ.