ಕರ್ನಾಟಕ

karnataka

ETV Bharat / bharat

ಜಾರ್ಖಂಡ್​​ನ 81 ಹೊಸ ಶಾಸಕರ ಪೈಕಿ 41 ಎಂಎಲ್​ಎಗಳ ಮೇಲೆ ಕ್ರಿಮಿನಲ್​ ಕೇಸ್​! - 41 ಎಂಎಲ್​ಎಗಳ ಮೇಲೆ ಕ್ರಿಮಿನಲ್​ ಕೇಸ್

81 ಕ್ಷೇತ್ರಗಳ ಜಾರ್ಖಂಡ್​ ವಿಧಾನಸಭೆ ಫಲಿತಾಂಶ ಈಗಾಗಲೇ ಹೊರಬಿದ್ದಿದ್ದು, ನೂತನವಾಗಿ ಆಯ್ಕೆಗೊಂಡಿರುವ 81 ಎಂಎಲ್​ಎಗಳ ಪೈಕಿ 41 ಶಾಸಕರ ಮೇಲೆ ಕ್ರಿಮಿನಲ್​ ಕೇಸ್​ಗಳಿರುವುದು ಬಹಿರಂಗಗೊಂಡಿದೆ.

41 newly elected MLAs have criminal cases
41 ಎಂಎಲ್​ಎಗಳ ಮೇಲೆ ಕ್ರಿಮಿನಲ್​ ಕೇಸ್

By

Published : Dec 25, 2019, 6:59 PM IST

ರಾಂಚಿ: ಕಳೆದೆರಡು ದಿನಗಳ ಹಿಂದೆ ಜಾರ್ಖಂಡ್​​ನ 81 ಕ್ಷೇತ್ರಗಳ ವಿಧಾನಸಭೆ ಫಲಿತಾಂಶ ಬಹಿರಂಗಗೊಂಡಿದ್ದು, ಹೊಸದಾಗಿ ಆಯ್ಕೆಯಾಗಿರುವ ಶಾಸಕರಲ್ಲಿ ಬರೋಬ್ಬರಿ 41 ಎಂಎಲ್​ಎಗಳ ವಿರುದ್ಧ ಕ್ರಿಮಿನಲ್​ ಕೇಸ್​ ಇರುವುದು ಇದೀಗ ಬಹಿರಂಗಗೊಂಡಿದೆ.

2019ರ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದ ವೇಳೆ, ತಮ್ಮ ಮೇಲಿನ ಅಪರಾದ ಕೃತ್ಯಗಳ ಬಗ್ಗೆ ಅಭ್ಯರ್ಥಿಗಳು ಮಾಹಿತಿ ನೀಡಿದ್ದರು. ಇದೀಗ ಆಯ್ಕೆಗೊಂಡಿರುವ ಶಾಸಕರಲ್ಲಿ ಇಷ್ಟೊಂದು ಹೊಸ ಸದಸ್ಯರ ಮೇಲೆ ಕ್ರಿಮಿನಲ್​ ಕೇಸ್​ಗಳಿರುವುದು ಗೊತ್ತಾಗಿದೆ. ಇನ್ನು ಶಾಸಕರಾಗಿ ಆಯ್ಕೆಯಾಗಿರುವ ಶಾಸಕರಲ್ಲಿ ಶೇ. 59ರಷ್ಟು ಪದವಿ ಶಿಕ್ಷಣಕ್ಕಿಂತಲೂ ಹೆಚ್ಚಿನ ಶಿಕ್ಷಣ ಪಡೆದುಕೊಂಡಿದ್ದಾರೆ ಎಂಬುದು ಗಮನಾರ್ಹ ವಿಷಯ.

ಯಾವ ಪಕ್ಷದ ಶಾಸಕರ ವಿರುದ್ಧ ಕೇಸ್​​

  • ಜಾರ್ಖಂಡ್​​ ಮುಕ್ತಿ ಮೋರ್ಚಾದ 17 ಶಾಸಕರು
  • ಕಾಂಗ್ರೆಸ್​​ನ 8 ಶಾಸಕರು
  • ಬಿಜೆಪಿಯ 11 ಶಾಸಕರು

ಇನ್ನು 2014ರ ಚುನಾವಣೆಯಲ್ಲಿ 81 ಶಾಸಕರ ಪೈಕಿ 51 ಎಂಎಲ್​ಎಗಳ ವಿರುದ್ಧ ಕ್ರಿಮಿನಲ್​ ಕೇಸ್​ಗಳಿರುವುದು ತಿಳಿದು ಬಂದಿತ್ತು. ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್​,ಜೆಎಂಎಂ ಹಾಗೂ ಆರ್​ಜೆಡಿ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಬರೋಬ್ಬರಿ 47 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿ ಸರ್ಕಾರ ರಚನೆ ಮಾಡಲು ಮುಂದಾಗಿದ್ದು, ಡಿಸೆಂಬರ್​ 29ರಂದು ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಹೇಮಂತ್​ ಸೊರೇನ್​ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ABOUT THE AUTHOR

...view details