ನವದೆಹಲಿ: ಪ್ರಪಂಚದೆಲ್ಲೆಡೆ ಆವರಿಸಿರುವ ಮಹಾಮಾರಿ ಕೊರೊನಾ ವೈರಸ್ ಭಾರತದಲ್ಲಿ ತನ್ನ ಅಟ್ಟಹಾಸ ಮುಂದುವರೆಸಿದೆ. ಒಂದೇ ದಿನ ಸುಮಾರು 20 ಸಾವಿರ ಜನರಿಗೆ ಸೋಂಕು ದೃಢವಾಗಿದೆ. ಒಟ್ಟು ಐದು ಲಕ್ಷ ಕೇಸ್ಗಳ ಪೈಕಿ ಮೂರು ಲಕ್ಷ ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಈವರೆಗೆ ಅತಿ ಹೆಚ್ಚು ಪ್ರಕರಣಗಳು ಎಂಬಂತೆ ಬರೋಬ್ಬರಿ 19,906 ಸೋಂಕಿತರು ಪತ್ತೆಯಾಗಿದ್ದು, 410 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 5,28,859ಕ್ಕೆ ಹಾಗೂ ಮೃತರ ಸಂಖ್ಯೆ 16,095ಕ್ಕೆ ಏರಿಕೆಯಾಗಿದೆ.