ಒಡಿಶಾ:ರಾಜ್ಯದಕೇಂದ್ರ ಪರಾ ಜಿಲ್ಲೆಯ ಗಹಿರ್ಮಥಾ ಸಮುದ್ರ ಬಳಿಯ ಅಭಯಾರಣ್ಯ ಪ್ರದೇಶದಲ್ಲಿ 40 ಅಡಿ ಉದ್ದದ ಅಳಿವಿನಂಚಿನಲ್ಲಿರುವ ತಿಮಿಂಗಿಲದ ಮೃತದೇಹ ಪತ್ತೆಯಾಗಿದೆ. ಇದರ ತೂಕ ಹತ್ತು ಟನ್ ಇದೆ.
ಒಡಿಶಾದಲ್ಲಿ ಕಂಡು ಬಂತು 40 ಅಡಿ ತಿಮಿಂಗಿಲದ ಮೃತದೇಹ : ವಿಡಿಯೋ - whale carcass found in Odisha
ಒಡಿಶಾದ ಕೇಂದ್ರಪರಾ ಜಿಲ್ಲೆಯ ಗಹಿರ್ಮಾಥ ಸಮುದ್ರ ಅಭಯಾರಣ್ಯ ಪ್ರದೇಶದಲ್ಲಿ 40 ಅಡಿ ಉದ್ದದ ಅಳಿವಿನಂಚಿನಲ್ಲಿರುವ ತಿಮಿಂಗಿಲದ ಶವ ಪತ್ತೆಯಾಗಿದೆ.
![ಒಡಿಶಾದಲ್ಲಿ ಕಂಡು ಬಂತು 40 ಅಡಿ ತಿಮಿಂಗಿಲದ ಮೃತದೇಹ : ವಿಡಿಯೋ 40-ft whale carcass washes ashore in Odisha](https://etvbharatimages.akamaized.net/etvbharat/prod-images/768-512-7319116-1062-7319116-1590293750382.jpg)
40 ಅಡಿ ತಿಮಿಂಗಿಲದ ಮೃತದೇಹ
"ಇದರ ದೇಹದಲ್ಲಿ ಗಾಯದ ಗುರುತುಗಳಾಗಿದ್ದು,ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಐಯುಸಿಎನ್) ಮರಣೋತ್ತರ ಪರೀಕ್ಷೆ ನಡೆಸಲಿದೆ" ಎಂದು ರಾಜನಗರ ಮ್ಯಾಂಗ್ರೋವ್ (ವನ್ಯಜೀವಿ) ಅರಣ್ಯ ವಿಭಾಗ ಡಿಎಫ್‌ಒ ಬಿಕಾಶ್ ರಂಜನ್ ದಾಶ್ ತಿಳಿಸಿದ್ದಾರೆ. ಹಡಗು ಅಥವಾ ಟ್ರಾಲರ್ ಪ್ರೊಪೆಲ್ಲರ್‌ಗಳ ಹೊಡೆತಕ್ಕೆ ಸಿಲುಕಿ ತಿಮಿಂಗಿಲ ಸಾವಿಗೀಡಾಗಿರಬಹುದು ಎಂದು ತಿಳಿಸಿದರು.
ತಿಮಿಂಗಿಲದ ಮೃತದೇಹ
"ಶವವನ್ನು ಮರಣೋತ್ತರ ಪರೀಕ್ಷೆ ನಂತರ ಹೂಳಬೇಕೆ, ಬೇಡವೇ ಎಂದು ಇನ್ನೂ ತೀರ್ಮಾನವಾಗಿಲ್ಲ ಅಲ್ಲದೆ ಸಸ್ತನಿಗಳ ಅಸ್ಥಿಪಂಜರದ ಅವಶೇಷಗಳನ್ನು ಸಂತಾನೋತ್ಪತ್ತಿಗಾಗಿ ಸಂರಕ್ಷಿಸಲು ಯೋಚಿಸುತ್ತಿದ್ದೇವೆ ಎಂದರು.