ನವದೆಹಲಿ:ನಾಲ್ಕು ವರ್ಷದ ಬಾಲಕಿಯೊಬ್ಬಳು ವಿಶಿಷ್ಟವಾಗಿ ತನ್ನ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾಳೆ. ಕ್ಲಬ್ಗೆ ಹೋಗುವ ಅಥವಾ ಪಾರ್ಟಿ ಮಾಡುವ ಬದಲು ದೆಹಲಿಯ ಚಾತ್ತರ್ಪುರ ನಿವಾಸಿ ಸುನಿಷ್ಕಾ ಧನ್ವರಿಯಾ ಸಸಿಗಳನ್ನ ನೆಡುವ ಮೂಲಕ ತಮ್ಮ ಹುಟ್ಟುಹಬ್ಬ ವಿಶಿಷ್ಟವಾಗಿ ಆಚರಣೆ ಮಾಡಿಕೊಂಡಿದ್ದಾರೆ.
ಈ ಬಾಲಕಿ ಹುಟ್ಟುಹಬ್ಬ ವಿಶಿಷ್ಟ- ವಿಭಿನ್ನ: ಬಾಲಕಿ ಪರಿಸರ ಕಾಳಜಿಗೆ ಎಲ್ಲರೂ ಮೆಚ್ಚುಗೆ! - ಹುಟ್ಟುಹಬ್ಬ
ಅತಿ ಚಿಕ್ಕ ವಯಸ್ಸಿನಲ್ಲೇ ಪರಿಸರ ಕಾಳಜಿ ತೋರಿಸಿರುವ ಬಾಲಕಿ ತನ್ನ ಹುಟ್ಟುಹಬ್ಬದಂದು ವಿಶಿಷ್ಟವಾಗಿ ಆಚರಣೆ ಮಾಡಿಕೊಂಡಿದ್ದಾಳೆ.
![ಈ ಬಾಲಕಿ ಹುಟ್ಟುಹಬ್ಬ ವಿಶಿಷ್ಟ- ವಿಭಿನ್ನ: ಬಾಲಕಿ ಪರಿಸರ ಕಾಳಜಿಗೆ ಎಲ್ಲರೂ ಮೆಚ್ಚುಗೆ! 4-yr-old Delhi girl](https://etvbharatimages.akamaized.net/etvbharat/prod-images/768-512-8412064-898-8412064-1597366262300.jpg)
ನನಗೆ ಪರಿಸರ ರಕ್ಷಣೆಗಾಗಿ ಸಸಿಗಳನ್ನು ನಡೆವುದನ್ನ ಬಿಟ್ಟು ಇನ್ನೇನನ್ನೂ ನೀಡುವ ಹೊಸ ಆಲೋಚನೆ ಹೊಳೆಯಲಿಲ್ಲ. ಇದೇ ಅತ್ಯುತ್ತಮ ಮಾರ್ಗ ಎಂದುಕೊಂಡೆ, ಇದೇ ನಾನು ಪ್ರಕೃತಿಗೆ ನೀಡುವ ಕೊಡುಗೆ ಎಂದುಕೊಂಡಿದ್ದೇನೆ. "ಮರಗಳನ್ನು ನೆಡುವುದು ಹವಾಮಾನ ಬದಲಾವಣೆಯನ್ನು ಎದುರಿಸಲು ಮತ್ತು ಪರಿಸರವನ್ನು ರಕ್ಷಿಸಲು ಸಹಾಯ ಮಾಡುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.
ನನ್ನ ಪ್ರತಿವರ್ಷದ ಜನ್ಮದಿನದಂದು ಮರಗಳನ್ನು ನೆಡುತ್ತೇನೆ ಮತ್ತು ಮರಗಳನ್ನು ಕಾಳಜಿಯಿಂದ ನೋಡಿಕೊಳ್ಳುತ್ತೇನೆ ಎಂದು ಪ್ರತಿಜ್ಞೆ ಕೈಗೊಂಡಿದ್ದಾಳೆ. ಮರಗಳನ್ನು ನೆಡುವುದರ ಮೂಲಕ ಈ ನಾಲ್ಕು ವರ್ಷದ ಮಗು ಪರಿಸರವನ್ನು ಪ್ರೀತಿಸುವುದು ಮತ್ತು ಪರಿಸರವನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತೋರಿಸಿಕೊಟ್ಟಿದ್ದಾಳೆ.